ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿ ವೀಡಿಯೋ ಬ್ಲ್ಯಾಕ್‍ಮೇಲ್ : ಇಬ್ಬರ ಬಂಧನ - Karavali Times ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿ ವೀಡಿಯೋ ಬ್ಲ್ಯಾಕ್‍ಮೇಲ್ : ಇಬ್ಬರ ಬಂಧನ - Karavali Times

728x90

9 February 2021

ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿ ವೀಡಿಯೋ ಬ್ಲ್ಯಾಕ್‍ಮೇಲ್ : ಇಬ್ಬರ ಬಂಧನ

ಬಂಟ್ವಾಳ, ಫೆ. 10, 2021 (ಕರಾವಳಿ ಟೈಮ್ಸ್) : ತಾಲೂಕಿನ ಬೋಳಂತೂರು ಗ್ರಾಮದ ನಿವಾಸಿಗಳಾದ ಅಬೂಬಕ್ಕರ್ ಸಿದ್ದೀಕ್ ಹಾಗೂ ಚಪ್ಪಿ ಎಂಬಿಬ್ಬರು ಯುವಕರು ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದಲ್ಲದೆ, ಖಾಸಗಿ ದೃಶ್ಯಗಳನ್ನು ಮೊಬೈಲ್ ಚಿತ್ರೀಕರಣ ನಡೆಸಿ ಬ್ಲಾಕ್‍ಮೇಲ್ ನಡೆಸಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಪ್ರಾಯದ ಬಾಲಕಿಗೆ 2020 ರ ಜನವರಿ ತಿಂಗಳಲ್ಲಿ ನೆರೆಕರೆಯ ಆರೋಪಿಗಳಾದ ಅಬೂಬಕ್ಕರ್ ಸಿದ್ದಿಕ್ ಮತ್ತು ಆತನ ಸ್ನೇಹಿತ ಚಪ್ಪಿ ಎಂಬವರುಗಳು ಪೆÇೀನ್ ಮುಖಾಂತರ ಪರಿಚಯವಾಗಿ ಸಲುಗೆಯಿಂದ ವರ್ತಿಸುತ್ತಿದ್ದರು. 2020ರ ಜನವರಿ 25 ರಂದು ರಾತ್ರಿ ಬಾಲಕಿಯನ್ನು ಪುಸಲಾಯಿಸಿ ಮನೆಯ ಬಳಿಯೇ ಆರೋಪಿಗಳು ಅತ್ಯಾಚಾರವೆಸಗಿ ಬಾಲಕಿಯ ಖಾಸಗಿ ಫೆÇಟೊಗಳನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಕೃತ್ಯವನ್ನು ಬಹಿರಂಗಪಡಿಸಿದಲ್ಲಿ ಖಾಸಗಿ ಪೆÇೀಟೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿರುತ್ತಾರೆ. ಬಳಿಕದ ದಿನಗಳಲ್ಲೂ ಆರೋಪಿಗಳು ಬಾಲಕಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಂಗಳವಾರ ಬಾಲಕಿಯ ಸಂಬಂಧಿಕರು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಕಲಂ : 376(2),376ಡಿಎ, 506 ಐಪಿಸಿ ಹಾಗೂ ಸೆಕ್ಷನ್ 4(2), 5(ಜಿ), 6, 14, ಪೋಕ್ಸೋ ಆಕ್ಟ್ 2012 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪೈಕಿ ಅಬೂಬಕ್ಕರ್ ಸಿದ್ದೀಕ್‍ನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಚಪ್ಪಿ ಎಂಬಾತನ ಬಂಧನಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕರ ಸೂಚನೆಯಂತೆ ವಿಟ್ಲ ಎಸ್ಸೈ ನೇತೃತ್ವದ ತನಿಖಾ ತಂಡ ತೆರಳಿದ್ದಾಗ ಸಂತ್ರಸ್ಥ ಬಾಲಕಿಯ ಅಣ್ಣನು ಆರೋಪಿ ಚಪ್ಪಿ ಎಂಬಾತನಿಗೆ ಪೆÇಲೀಸರು ಆತನ ಬಂಧನಕ್ಕೆ ಬರುತ್ತಿರುವ ಮಾಹಿತಿ ನೀಡಿ ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿರುತ್ತಾನೆ. ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದಲ್ಲಿ ಸಂತ್ರಸ್ತೆ ಬಾಲಕಿಯ ಅಣ್ಣನ ವಿರುದ್ದವೂ ಪೊಲೀಸರು ಕಲಂ 225 ಐಪಿಸಿ ಅಡಿ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿ ವೀಡಿಯೋ ಬ್ಲ್ಯಾಕ್‍ಮೇಲ್ : ಇಬ್ಬರ ಬಂಧನ Rating: 5 Reviewed By: karavali Times
Scroll to Top