ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ : ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಮುನ್ನಡೆ, ಬಿಜೆಪಿಗೆ ಭಾರೀ ಹಿನ್ನಡೆ - Karavali Times ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ : ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಮುನ್ನಡೆ, ಬಿಜೆಪಿಗೆ ಭಾರೀ ಹಿನ್ನಡೆ - Karavali Times

728x90

17 February 2021

ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ : ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಮುನ್ನಡೆ, ಬಿಜೆಪಿಗೆ ಭಾರೀ ಹಿನ್ನಡೆ

ಚಂಡೀಗಢ, ಫೆ. 17, 2021 (ಕರಾವಳಿ ಟೈಮ್ಸ್) : ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೊಸ ಇತಿಹಾಸ ಬರೆದಿದ್ದು, ಒಟ್ಟು 8 ಪುರಸಭೆಗಳ ಪೈಕಿ 4ರಲ್ಲಿ ಜಯಭೇರಿ ಸಾಧಿಸಿ, ಮೂರು ಕಡೆ ಮುನ್ನಡೆ ಕಾಯ್ದುಕೊಂಡಿದೆ. ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣಾ ಫಲಿಂತಾಶ ಪ್ರಕಟವಾಗುತ್ತಿದ್ದು, ಬೆಳಗ್ಗೆ 9 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 8 ಪುರಸಭೆಗಳ 2,302 ವಾರ್ಡ್‍ಗಳಿಗೆ ಚುನಾವಣೆ ನಡೆದಿದ್ದು, 109 ಮುನ್ಸಿಪಲ್ ಕೌನ್ಸಿಲ್‍ಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶ ಇದೀಗ ಪ್ರಕಟವಾಗುತ್ತಿದ್ದು, 8 ಪುರಸಭೆಗಳ ಪೈಕಿ ಬತಿಂಡಾ, ಮೊಗಾ, ಹೋಶಿಯಾರ್‍ಪುರ ಮತ್ತು ಪಠಾಣ್‍ಕೋಟ್ ಪುರಸಭೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಅದೇ ರೀತಿ ಬಟಲಾ, ಕಪುರ್ಥಾಲಾ ಮತ್ತು ಅಬೋಹರ್ ಪುರಸಭೆಗಳಲ್ಲಿ ಕೈ ಪಾಳಯ ಮುನ್ನಡೆ ಕಾಯ್ದುಕೊಂಡಿದೆ. 53 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬತಿಂಡಾದಲ್ಲಿ ಕಾಂಗ್ರೆಸ್ ಪಕ್ಷ ಮೇಯರ್ ಸ್ಥಾನ ಪಡೆದುಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿ ಹಾಕಿದೆ. ಬತಿಂಡಾ ಲೋಕಸಭಾ ಕ್ಷೇತ್ರವನ್ನು ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಬಾದಲ್ ಪ್ರತಿನಿಧಿಸುತ್ತಿದ್ದು, ಕೃಷಿ ಕಾನೂನು ವಿಚಾರವಾಗಿ ಇತ್ತೀಚೆಗಷ್ಟೇ ಶಿರೋಮಣಿ ಅಕಾಳಿದಳ ಎನ್‍ಡಿಎ ಮೈತ್ರಿ ಕೂಟದಿಂದ ಹೊರಬಂದಿತ್ತು. ಬತಿಂಡಾ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕ ಹಾಗೂ ರಾಜ್ಯ ಹಣಕಾಸು ಸಚಿವ ಮನಪ್ರೀತ್ ಸಿಂಗ್ ಬಾದಲ್ ಪ್ರತಿನಿಧಿಸಿದ್ದಾರೆ. ಹಾಲಿ ಚುನಾವಣಾ ಫಲಿತಾಂಶಕ್ಕೆ ರೈತರ ಪ್ರತಿಭಟನೆ ಕಾರಣ ಎನ್ನಲಾಗುತ್ತಿದ್ದು, ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯ ಪರಿಣಾಮ ಕಾಂಗ್ರೆಸ್ ಇತಿಹಾಸ ಸೃಷ್ಟಿಸಲು ಕಾರಣ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಒಂದು ಫಲಿತಾಂಶದಿಂದಾಗಿ ಬಿಜೆಪಿಗೆ ಪಂಜಾಬ್‍ನಲ್ಲಿ ಭಾರೀ ಹಿನ್ನಡೆಯಾದಂತಾಗಿದೆ. ಫೆಬ್ರವರಿ 14ರಂದು 109 ನಗರಸಭೆ, ನಗರ ಪಂಚಾಯತ್ ಹಾಗೂ ಏಳು ಪುರಸಭೆಗಳಿಗೆ ಚುನಾವಣೆ ನಡೆದಿದ್ದು, ಶೇ. 71.39 ಮತದಾನವಾಗಿತ್ತು. ಮೊಹಾಲಿ ಮುನ್ಸಿಪಲ್ ಕಾಪೆರ್Çೀರೇಷನ್ನಿನ 2 ಬೂತ್‍ಗಳಲ್ಲಿ ಮಂಗಳವಾರ ಮರು ಮತದಾನ ನಡೆದಿತ್ತು. 9,222 ಸ್ಪರ್ಧಿಗಳಲ್ಲಿ ಕಾಂಗ್ರೆಸ್ ಪಕ್ಷದಿಂದ 2,037 ಸದಸ್ಯರು ಚುನಾವಣೆಗೆ ಸ್ಪರ್ಧಿಸಿದ್ದರೆ, ಬಿಜೆಪಿ ಪಕ್ಷದಿಂದ 1003 ಮಂದಿ ಕಣಕ್ಕಿಳಿದಿದ್ದರು. ಆಮ್ ಆದ್ಮಿ ಪಕ್ಷದಿಂದ 1,606 ಮಂದಿ ಹಾಗೂ ಬಿಎಸ್ಪಿ ಪಕ್ಷದಿಂದ 160 ಮಂದಿ ಸ್ಪರ್ಧೆಗಿಳಿದಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ : ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಮುನ್ನಡೆ, ಬಿಜೆಪಿಗೆ ಭಾರೀ ಹಿನ್ನಡೆ Rating: 5 Reviewed By: karavali Times
Scroll to Top