ಮಂಗಳೂರು, ಫೆ. 16, 2021 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 5 ವಿದ್ಯುತ್ ನಿಗಮಗಳಾದ ಮೆಸ್ಕಾಂ, ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಹಾಗೂ ಜೆಸ್ಕಾಂ ಇವುಗಳ ಬಿಲ್ ಪಾವತಿಗೆ ಸಂಬಂಧಪಟ್ಟಂತೆ ರಾಜ್ಯದಲ್ಲೇ ಮೊದಲ ಬಾರಿಗೆ ಪೆÇೀಸ್ಟ್ ಮಾಸ್ಟರ್ ಜನರಲ್, ದಕ್ಷಿಣ ಕರ್ನಾಟಕ ವಲಯ ಮತ್ತು ಮೆಸ್ಕಾಂನೊಂದಿಗಿನ ಒಡಂಬಡಿಕೆಯಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಂಚೆ ಕಛೇರಿಯ ಮೂಲಕ ಆನ್ ಲೈನ್ ತಂತ್ರಜ್ಞಾನದಡಿಯಲ್ಲಿ ವಿದ್ಯುತ್ ಬಿಲ್ ಪಾವತಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಇದುವರೆಗೆ ಮೆಸ್ಕಾಂ ಬಿಲ್ಲುಗಳನ್ನು ಮಂಗಳೂರು, ಪುತ್ತೂರು, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಅಂಚೆ ಕಛೇರಿಗಳಲ್ಲಿ ಆಫ್ ಲೈನ್ ಮುಖಾಂತರ ಆರ್ ಆರ್ ಸಂಖ್ಯೆ ಹಾಗೂ ಮೆಸ್ಕಾಂ ಸಬ್ ಡಿವಿಜನ್ ಕೋಡ್ ಆಧಾರದಲ್ಲಿ ಸ್ವೀಕರಿಸಲಾಗುತ್ತಿತ್ತು. ಈ ಕಾರ್ಯ ವಿಧಾನದಲ್ಲಿ ಎಲ್ಲಾ ಅಂಚೆ ಕಛೇರಿಗಳಲ್ಲಿ ಬುಕ್ ಮಾಡಲಾದ ಮೆಸ್ಕಾಂ ಬಿಲ್‍ಗಳ ವಿವರಗಳನ್ನು ಅಂಚೆ ಇಲಾಖೆಯು ಮರುದಿನ ಮೆಸ್ಕಾಂ ಇಲಾಖೆಗೆ ನೀಡುತ್ತಿತ್ತು. ಇದರಿಂದಾಗಿ ಮೆಸ್ಕಾಂ ಬಿಲ್ಲುಗಳ ಮೊತ್ತವನ್ನು ಗ್ರಾಹಕರ ಮೀಟರ್ ಸಂಖ್ಯೆಗೆ ಹೊಂದಿಸಲು ಒಂದು ದಿನ ವಿಳಂಬವಾಗುತ್ತಿತ್ತು. ಹಾಗೂ ಬಿಲ್ಲಿನಲ್ಲಿ ನಮೂದಾಗಿರುವ ಆರ್ ಆರ್ ಸಂಖ್ಯೆ ಅಥವಾ ಮೆಸ್ಕಾಂ ಸಬ್ ಡಿವಿಜನ್ ಕೋಡ್ ಮಾಸಿ ಹೋಗಿದ್ದಲ್ಲಿ ತಪ್ಪಾದ ಆರ್ ಆರ್ ಸಂಖ್ಯೆಗೆ ಅಥವಾ ತಪ್ಪಾದ ಮೆಸ್ಕಾಂ ಸಬ್ ಡಿವಿಜನ್‍ಗೆ ಪಾವತಿಯಾಗುವ ಸಾಧ್ಯತೆಯಿತ್ತು. ಈ ಪ್ರಕ್ರಿಯೆಯಲ್ಲಿ ಇರುವ ನ್ಯೂನ್ಯತೆಗಳನ್ನು ಹೊಗಲಾಡಿಸಲು ಮಂಗಳೂರು ಅಂಚೆ ವಿಭಾಗವು ಮುಂದಾಗಿದ್ದು, ಇನ್ನು ಮುಂದೆ ಎಲ್ಲಾ ಇಲಾಖಾ ಅಂಚೆ ಕಛೇರಿಗಳಲ್ಲಿ ಸ್ವೀಕರಿಸಲಾಗುವ ವಿದ್ಯುತ್ ಬಿಲ್‍ಗಳನ್ನು/ ಎ.ಎಸ್.ಡಿ. (ಸೆಕ್ಯುರಿಟಿ ಡೆಪಾಸಿಟ್) ಬಿಲ್‍ಗಳನ್ನು ಎಪಿಐ ತಂತ್ರಜ್ಞಾನವನ್ನು ಅಳವಡಿಸಿ ಆನ್ ಲೈನ್ ಮುಖಾಂತರ ಸ್ವೀಕರಿಸಲಾಗುವುದು. ಈ ತಂತ್ರಜ್ಞಾನದ ಮೂಲಕ ಇಲಾಖಾ ಅಂಚೆ ಕಛೇರಿಗಳಲ್ಲಿ ಸ್ವೀಕರಿಸಲಾದ ಮೆಸ್ಕಾಂ/ ಎ.ಎಸ್.ಡಿ. ಬಿಲ್ ಮಾಹಿತಿಯು ತಕ್ಷಣದಲ್ಲಿ ಮೆಸ್ಕಾಂ ಸರ್ವರ್‍ಗೆ ತಲುಪಿ ಆಯಾಂiÀi ಆರ್ ಆರ್ ಸಂಖ್ಯೆಗೆ ಕೂಡಲೇ ಅಪ್‍ಡೇಟ್‍ಗೊಳ್ಳುವುದು.
ಮುಂದಿನ ದಿನಗಳಲ್ಲಿ ಗ್ರಾಹಕರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ವಿದ್ಯುತ್ ಬಿಲ್/ ಎ.ಎಸ್.ಡಿ. ಬಿಲ್‍ಗಳನ್ನು ಯಾವುದೇ ಇಲಾಖಾ ಅಂಚೆ ಕಛೇರಿಗಳಲ್ಲಿ ಪಾವತಿಸಬಹುದು. ಈ ಮೊದಲು ಉಡುಪಿ ಮೆಸ್ಕಾಂ ವಿಭಾಗಕ್ಕೆ ಸಂಬಂಧ ಪಟ್ಟ ಬಿಲ್‍ಗಳನ್ನು ಉಡುಪಿ ಅಂಚೆ ವಿಭಾಗದ ಅಂಚೆ ಕಛೇರಿಗಳಲ್ಲಿ ಮಾತ್ರ ಪಾವತಿಸಬಹುದಾಗಿದ್ದು, ಬೇರೆ ಅಂಚೆ ಕಛೇರಿಗಳಲ್ಲಿ ಪಾವತಿಸಲಾಗುತ್ತಿರಲಿಲ್ಲ. ಹಾಗೆಯೇ ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯ ಮೆಸ್ಕಾಂ ಬಿಲ್‍ಗಳನ್ನು ಮಂಗಳೂರಿನ ಅಂಚೆ ಕಛೇರಿಗಳಲ್ಲಿ ಪಾವತಿಸಲು ಸಾಧ್ಯವಿರಲಿಲ್ಲ. ಇದೀಗ ಯಾವುದೇ ಮೆಸ್ಕಾಂ ವಿಭಾಗಕ್ಕೆ ಸಂಬಂಧಪಟ್ಟ ಬಿಲ್‍ಗಳನ್ನು ಕರ್ನಾಟಕದ ಯಾವುದೇ ಇಲಾಖಾ ಅಂಚೆ ಕಛೇರಿಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪಾವತಿಸಬಹುದು. ಇದರಿಂದ ಕೆಲಸಕ್ಕಾಗಿ ಪುತ್ತೂರು, ಮಂಗಳೂರು ಉಡುಪಿ ಮಧ್ಯೆ ಓಡಾಡುವ ಗ್ರಾಹಕರು ತಮ್ಮ ಮನೆಯ ವಿದ್ಯುತ್ ಬಿಲ್ಲನ್ನು ತಮ್ಮ ಕೆಲಸದ ಕಛೇರಿಯ ಸಮೀಪದ ಅಂಚೆ ಕಛೇರಿಗಳಲ್ಲಿ ಪಾವತಿಸಲು ಅವಕಾಶವಾಗಲಿದೆ.
ಈ ಹೊಸ ತಂತ್ರಜ್ಞಾನದಿಂದ ಬಿಲ್ ಪಾವತಿಸಲು ಅಂಚೆ ವಿಭಾಗದ ಗಡಿ ಇನ್ನು ಮುಂದೆ ಅನ್ವಯವಾಗುವುದಿಲ್ಲ. ಮೆಸ್ಕಾಂ ಬಿಲ್ ಪ್ರತಿ ತಾರದೆ ಕೇವಲ ಬಿಲ್‍ನಲ್ಲಿ ನಮೂದಾಗಿರುವ ಅಕೌಂಟ್ ನಂಬರ್ ಅಥವಾ ಆರ್ ಆರ್ ನಂಬರ್+ಲೊಕೇಶನ್ ಕೋಡ್ ಹೇಳಿ ಬಿಲ್ ಕಟ್ಟಬಹುದು., ಉಡುಪಿ/ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದುವರೆಗೆ ಅಂಚೆ ಕಛೇರಿಗಳಲ್ಲಿ ಮೆಸ್ಕಾಂನ ಸೆಕ್ಯುರಿಟಿ ಡೆಪಾಸಿಟ್ (ಎ.ಎಸ್.ಡಿ.) ಸ್ವೀಕರಿಸುವ ಸೌಲಭ್ಯ ಇರಲಿಲ್ಲ. ಇನ್ನು ಮುಂದೆ ಈ ಸೌಲಭ್ಯ ಅಂಚೆ ಕಛೇರಿಗಳಲ್ಲಿ ಇರಲಿದೆ. ದ.ಕ. ಜಿಲ್ಲೆಯಲ್ಲಿ ಇದು ಈಗಾಗಲೇ ಲಭ್ಯವಿದೆ.
ಎಲ್ಲಾ ಮೆಸ್ಕಾಂ ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು. ಸದ್ಯಕ್ಕೆ ಈ ಸೇವೆಯು ಎಲ್ಲಾ ಇಲಾಖಾ ಅಂಚೆ ಕಛೇರಿಗಳಲ್ಲಿ ಲಭ್ಯವಿದ್ದು, ಶಾಖಾ ಅಂಚೆ ಕಛೇರಿಗಳಲ್ಲಿ ಈ ಮೊದಲಿನ ಆಫ್ ಲೈನ್ ತಂತ್ರಜ್ಞಾನದಡಿಯಲ್ಲೇ ಮೆಸ್ಕಾಂ/ ಎ.ಎಸ್.ಡಿ. ಬಿಲ್ ಗಳನ್ನು ಸ್ವೀಕರಿಸಲಾಗುವುದು. ಈ ಆನ್‍ಲೈನ್ ಸೇವೆಯನ್ನು ಶೀಘ್ರದಲ್ಲೇ ಎಲ್ಲಾ ಶಾಖಾ ಅಂಚೆ ಕಛೇರಿಗಳಲ್ಲೂ ಪ್ರಾರಂಭಿಸಲಾಗುವುದು ಎಂದು ಮಂಗಳೂರು ಹಿರಿಯ ಅಂಚೆ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
16 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment