ಮಂಗಳೂರು : ಪ್ರತಿಷ್ಠಿತ ಆಸ್ಪತ್ರೆ ಮಾಲಕರ ಮನೆ, ಆಸ್ಪತ್ರೆ, ಕಛೇರಿಗಳ ಮೇಲೆ ಏಕಕಾಲದಲ್ಲಿ ಐಟಿ ದಾಳಿ - Karavali Times ಮಂಗಳೂರು : ಪ್ರತಿಷ್ಠಿತ ಆಸ್ಪತ್ರೆ ಮಾಲಕರ ಮನೆ, ಆಸ್ಪತ್ರೆ, ಕಛೇರಿಗಳ ಮೇಲೆ ಏಕಕಾಲದಲ್ಲಿ ಐಟಿ ದಾಳಿ - Karavali Times

728x90

17 February 2021

ಮಂಗಳೂರು : ಪ್ರತಿಷ್ಠಿತ ಆಸ್ಪತ್ರೆ ಮಾಲಕರ ಮನೆ, ಆಸ್ಪತ್ರೆ, ಕಛೇರಿಗಳ ಮೇಲೆ ಏಕಕಾಲದಲ್ಲಿ ಐಟಿ ದಾಳಿ

ಮಂಗಳೂರು, ಫೆ. 17, 2021 (ಕರಾವಳಿ ಟೈಮ್ಸ್) : ಬುಧವಾರ ಬೆಳಿಗ್ಗೆಯೇ ಮಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆಗಳನ್ನು ನಡೆಸುತ್ತಿರುವ ಉದ್ಯಮಿಗಳ ಮನೆ, ಕಛೇರಿ ಹಾಗೂ ಆಸ್ಪತ್ರೆಗಳ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಎಜೆ ಗ್ರೂಪ್ ಸಂಸ್ಥೆಯ ಮಾಲಕ ಎ.ಜೆ. ಶೆಟ್ಟಿ, ಯೆನಪೆÇೀಯ ಗ್ರೂಪ್ ಸಂಸ್ಥೆಯ ಮಾಲಕ ಅಬ್ದುಲ್ಲ ಕುಂಞÂ ಹಾಗೂ ಕಣಚೂರು ಗ್ರೂಪ್ ಸಂಸ್ಥೆಯ ಮಾಲಕ ಕಣಚೂರು ಮೋನು ಅವರ ಕಚೇರಿ ಮತ್ತು ಮನೆಯ ಮೇಲೆ ಈ ದಾಳಿ ನಡೆದಿದೆ. ಮೂರೂ ಸಂಸ್ಥೆಗಳ ಮನೆ, ಆಸ್ಪತ್ರೆ, ಕಚೇರಿ ಮೇಲೆ ಏಕಕಾಲದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಮೇಲೂ ಏಕಕಾಲದಲ್ಲಿ ಐಟಿ ದಾಳಿ ನಡೆದಿದ್ದು. ಏಳು ಮಂದಿ ಅಧಿಕಾರಿಗಳ ತಂಡದಿಂದ ಐಟಿ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಪ್ರತಿಷ್ಠಿತ ಆಸ್ಪತ್ರೆ ಮಾಲಕರ ಮನೆ, ಆಸ್ಪತ್ರೆ, ಕಛೇರಿಗಳ ಮೇಲೆ ಏಕಕಾಲದಲ್ಲಿ ಐಟಿ ದಾಳಿ Rating: 5 Reviewed By: karavali Times
Scroll to Top