ಬಂಟ್ವಾಳ, ಫೆ 14, 2021 (ಕರಾವಳಿ ಟೈಮ್ಸ್) : ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಮಂಗಳೂರು ಇದರ ಜಿಲ್ಲಾಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಅವರನ್ನು ಅವರ ಹುಟ್ಟೂರು ಪಲ್ಲಮಜಲಿ ಜಮಾಅತ್ ಆಡಳಿತ ಸಮಿತಿ ಹಾಗೂ ವಿವಿಧ ಸ್ಥಳೀಯ ಸಂಘ-ಸಂಸ್ಥೆಗಳ ವತಿಯಿಂದ ಶನಿವಾರ ರಾತ್ರಿ ಮಸೀದಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮೂಲತಃ ಪಲ್ಲಮಜಲು ನಿವಾಸಿಯಾಗಿರುವ ಹಾಜಿ ಕೆ.ಎಸ್. ಅಬೂಬಕ್ಕರ್ ಪಲಮಜಲು ಅವರು ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿದ್ದರೂ ಪಲ್ಲಮಜಲು ಜಮಾತ್ ವ್ಯಾಪ್ತಿಯಲ್ಲಿ ಇಂದಿಗೂ ಸಲ್ಲಿಸುತ್ತಿರುವ ಜನಪರ, ಸಾಮಾಜಿಕ ಸೇವಾ ಕಾರ್ಯಗಳನ್ನು ಮನ್ನಿಸಿ ಪಲ್ಲಮಜಲು ಮಸೀದಿಯ ಆಡಳಿತ ಸಮಿತಿ, ಎಸ್ಕೆಎಸ್ಸೆಸ್ಸೆಫ್ ಪಲ್ಲಮಜಲು ಘಟಕ, ಪಲ್ಲಮಜಲು ಮುಬಾರಕ್ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ (ರಿ), ಪಲ್ಲಮಜಲು ಅಸಾಸುಲ್ ಇಸ್ಲಾಂ ಸ್ಟೂಡೆಂಟ್ಸ್ ಫೆಡರೇಶನ್ (ರಿ) ಹಾಗೂ ಅಬೂಬಕ್ಕರ್ ಅವರಿಗೆ ಧಾರ್ಮಿಕ ವಿಧ್ಯಾಭ್ಯಾಸ ಕಲಿಸಿದ ಗುರುವರ್ಯ ಹಾಜಿ ಸಿ.ಕೆ. ಸೂಫಿ ಮುಸ್ಲಿಯಾರ್ ಅವರು ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಅವರನ್ನು ಗೌರವಿಸಿ ಸನ್ಮಾನಿಸಿದರು.
ಪಲ್ಲಮಜಲು ಮಸೀದಿ ಆಡಳಿತ ಸಮಿತಿಯಲ್ಲಿ ಸುಮಾರು 6 ಬಾರಿ ಅಧ್ಯಕ್ಷರಾಗಿ 11 ಬಾರಿ ಪ್ರಧಾನ ಕಾರ್ಯದರ್ಶಿಯಾಗಿ, ಬಳಿಕ ಗೌರವಾಧ್ಯಕ್ಷರಾಗಿ, ಜೊತೆ ಕಾರ್ಯದರ್ಶಿಯಾಗಿ ಹೀಗೆ ಒಟ್ಟು ಸುಮಾರು 30 ವರ್ಷಗಳ ಕಾಲ ಮಸೀದಿ ಸೇವೆಯನ್ನು ಮಾಡಿದ ಹಾಜಿ ಕೆ.ಎಸ್. ಅಬೂಬಕ್ಕರ್ ಅವರು ಇಲ್ಲಿನ ಮುಬಾರಕ್ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ಇದರ ಸ್ಥಾಪಕಾಧ್ಯಕ್ಷರು ಹಾಗೂ ಎಸ್ಕೆಎಸ್ಸೆಸ್ಸೆಫ್ ಘಟಕದ ಸದಸ್ಯರಾಗಿರುತ್ತಾರೆ.
ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಅವರು ಸರಕಾರಿ ಯೋಜನೆಯಾಗಿರುವ ಸಂಪೂರ್ಣ ಸಾಕ್ಷರತಾ ಆಂದೋಲನದ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಸದಸ್ಯರಾಗಿ, ದಫ್ ಎಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ಸದಸ್ಯರಾಗಿ, ನೇತ್ರಾವತಿ ಜ್ಯೂನಿಯರ್ ಛೇಂಬರ್ ಸದಸ್ಯರಾಗಿ, ಬಂಟ್ವಾಳ ತಾಲೂಕು ಸೌಹಾರ್ದ ಒಕ್ಕೂಟದ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಕೋಶಾಧಿಕಾರಿಯಾಗಿ, ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯರಾಗಿ, ಅಹಿಂದ ಜನ ಚಳುವಳಿ ದಕ್ಷಿಣ ಕನ್ನಡ ಜಿಲ್ಲಾ ಸದಸ್ಯರಾಗಿ, ಮೈನಾರಿಟಿ ಡೆವಲಪ್‍ಮೆಂಟ್ ಫೌಂಡೇಶನ್ (ರಿ) ದ.ಕ. ಜಿಲ್ಲಾ ಕಾಯಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ಸದಸ್ಯರಾಗಿ ಸಾಮಾಜಿಕ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಇತ್ತೀಚೆಗೆ ಮಂಗಳೂರು ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಇದರ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
14 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment