ಬಂಟ್ವಾಳ, ಫೆ. 21, 2021 (ಕರಾವಳಿ ಟೈಮ್ಸ್) : ಆನ್ ಲೈನ್ ಮೂಲಕ ಕಂಪೆನಿ ಉತ್ಪನ್ನಗಳನ್ನು ಖರೀದಿಸುವಾಗ ಜಾಗೃತಿ ವಹಿಸಬೇಕು. ಇಲ್ಲದಿದ್ದರೆ ಗ್ರಾಹಕರು ಮೋಸ ಹೋಗುವ ಸಂದರ್ಭ ಎದುರಾಗಬಹುದು ಎಂದು ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಎಚ್ಚರಿಸಿದರು.
ಕರ್ನಾಟಕ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಘಟಕ, ಕಾವಳಪಡೂರು-ವಗ್ಗ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಇವುಗಳ ಜಂಟಿ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಫೇ 20 ರಂದು ಶನಿವಾರ ನಡೆದ ಸೈಬರ್ ಕ್ರೈಮ್ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳ ಪ್ರಕರಣಗಳನ್ನು ತಕ್ಷಣ ಸಂಬಂಧಿತ ಕಾನೂನು ಪ್ರಾಧಿಕಾರಗಳ ಗಮನಕ್ಕೆ ತನ್ನಿ. ಅವುಗಳನ್ನು ಮುಚ್ಚಿಹಾಕಲು ಹೋಗದಿರಿ ಎಂದವರು ಸಲಹೆ ನೀಡಿದರು.
ಇದೇ ವೇಳೆ ಸೈಬರ್ ಕ್ರೈಂ ತಡೆಗಟ್ಟಲು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಪ್ರಕರಣ ದಾಖಲಿಸುವ ವಿಧಾನಗಳನ್ನು ಪಿಎಸ್ಸೈ ಪ್ರಸನ್ನ ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪತ್ರಕರ್ತರ ಸಂಘ (ಕೆಜೆಯು) ದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣ ಸಂಕಲ್ಪಕ್ಕೆ ಶಿಕ್ಷಕ- ಪೆÇೀಷಕ ವರ್ಗದ ಜತೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದರು. ಕೆಜೆಯು ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ಫಾರೂಕ್ ಗೂಡಿನಬಳಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರೌಢ ಶಾಲಾ ವಿಭಾಗದ ಕಾರ್ಯಾಧ್ಯಕ್ಷ ಪಿ. ಜಿನರಾಜ ಆರಿಗ, ಸಾಮಾಜಿಕ ಮುಖಂಡ ಇಬ್ರಾಹಿಂ ಕೈಲಾರ್, ಕೆಜೆಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಭಾಗವಹಿಸಿದ್ದರು.
ಪೌಢಶಾಲಾ ಮುಖ್ಯ ಶಿಕ್ಷಕ ಶೇಖ್ ಆದಂ ಸಾಹೇಬ್ ಸ್ವಾಗತಿಸಿ, ಲೈಲಾ ಪರ್ವಿಸ್ ವಂದಿಸಿದರು. ಶಿಕ್ಷಕ ಫೆಡ್ರಿಕ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಪೆÇೀಷಕರು ಪೊಲೀಸ್ ಅಧಿಕಾರಿ ಜೊತೆ ಸಂವಾದದಲ್ಲಿ ಪಾಲ್ಗೊಂಡರು.
21 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment