ಪ್ರತಿಭಟನೆ ಸ್ಥಳದಲ್ಲಿ ಇಂಟರ್ ನೆಟ್ ಕಡಿತ ವಿರೋಧಿಸಿ ಫೆ. 6 ರಂದು ದೇಶಾದ್ಯಂತ ರಸ್ತೆ ತಡೆಗೆ ರೈತ ಸಂಘಟನೆಗಳ ಕರೆ - Karavali Times ಪ್ರತಿಭಟನೆ ಸ್ಥಳದಲ್ಲಿ ಇಂಟರ್ ನೆಟ್ ಕಡಿತ ವಿರೋಧಿಸಿ ಫೆ. 6 ರಂದು ದೇಶಾದ್ಯಂತ ರಸ್ತೆ ತಡೆಗೆ ರೈತ ಸಂಘಟನೆಗಳ ಕರೆ - Karavali Times

728x90

1 February 2021

ಪ್ರತಿಭಟನೆ ಸ್ಥಳದಲ್ಲಿ ಇಂಟರ್ ನೆಟ್ ಕಡಿತ ವಿರೋಧಿಸಿ ಫೆ. 6 ರಂದು ದೇಶಾದ್ಯಂತ ರಸ್ತೆ ತಡೆಗೆ ರೈತ ಸಂಘಟನೆಗಳ ಕರೆ

ಪ್ರತಿಭಟನೆ ಸ್ಥಳದಲ್ಲಿ ಇಂಟರ್ ನೆಟ್ ಸ್ಥಗಿತ ವಿರೋಧಿಸಿ ಫೆ.6 ರಂದು ದೇಶಾದ್ಯಂತ ರಸ್ತೆ ತಡೆಗೆ ಕರೆ ನೀಡಿದ ರೈತ‌
ನವದೆಹಲಿ, ಫೆ. 02, 2021 (ಕರಾವಳಿ ಟೈಮ್ಸ್) : ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಕಳೆದ ಎರಡು ತಿಂಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಹೋರಾಟದ ಸ್ಥಳಗಳ ಸಮೀಪದ ಪ್ರದೇಶಗಳಲ್ಲಿ ಇಂಟರ್ ನೆಟ್ ನಿಷೇಧಿಸಿದ ಸರಕಾರದ ಕ್ರಮದ ವಿರುದ್ಧ ಫೆಬ್ರವರಿ 6 ರಂದು ದೇಶಾದ್ಯಂತ ರಸ್ತೆ ತಡೆಗೆ ಕರೆ ನೀಡಿದ್ದಾರೆ. ಫೆಬ್ರವರಿ 6 ರಂದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್ ಮಾಡುವುದಾಗಿ ರೈತ ಸಂಘಟನೆಗಳು ಘೋಷಿಸಿವೆ. ಈ ಸಂಬಂಧ ಇಂದು ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಮುಖಂಡರು, ಪ್ರತಿಭಟನಾ ಸ್ಥಳಗಳಲ್ಲಿ ನೀರು, ವಿದ್ಯುತ್ ಮತ್ತು ಇಂಟರ್ ನೆಟ್ ಸ್ಥಗಿತಗೊಳಿಸಿದ ಸರ್ಕಾರದ ನಿರ್ಧಾರ ಖಂಡಿಸಿ ಫೆಬ್ರವರಿ 6 ರಂದು ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ರಸ್ತೆಗಳನ್ನು ಬಂದ್ ಮಾಡಲಾಗುವುದು ಎಂದರು. ಕೇಂದ್ರ ಬಜೆಟ್ 2021-22ರಲ್ಲಿ ರೈತರನ್ನು ನಿರ್ಲಕ್ಷಿಸಲಾಗಿದೆ ಎಂದು ಇದೇ ವೇಳೆ ರೈತ ಮುಖಂಡರು ಆರೋಪಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಪ್ರತಿಭಟನೆ ಸ್ಥಳದಲ್ಲಿ ಇಂಟರ್ ನೆಟ್ ಕಡಿತ ವಿರೋಧಿಸಿ ಫೆ. 6 ರಂದು ದೇಶಾದ್ಯಂತ ರಸ್ತೆ ತಡೆಗೆ ರೈತ ಸಂಘಟನೆಗಳ ಕರೆ Rating: 5 Reviewed By: karavali Times
Scroll to Top