ರೂಪಾಂತರಿ ಕೊರೋನಾ ಅಟ್ಟಹಾಸ : ಅಮರಾವತಿ ಜಿಲ್ಲೆಯಲ್ಲಿ 1 ವಾರ ಲಾಕ್‍ಡೌನ್ ಘೋಷಿಸಿದ ಮಹಾ ಸರಕಾರ - Karavali Times ರೂಪಾಂತರಿ ಕೊರೋನಾ ಅಟ್ಟಹಾಸ : ಅಮರಾವತಿ ಜಿಲ್ಲೆಯಲ್ಲಿ 1 ವಾರ ಲಾಕ್‍ಡೌನ್ ಘೋಷಿಸಿದ ಮಹಾ ಸರಕಾರ - Karavali Times

728x90

21 February 2021

ರೂಪಾಂತರಿ ಕೊರೋನಾ ಅಟ್ಟಹಾಸ : ಅಮರಾವತಿ ಜಿಲ್ಲೆಯಲ್ಲಿ 1 ವಾರ ಲಾಕ್‍ಡೌನ್ ಘೋಷಿಸಿದ ಮಹಾ ಸರಕಾರ

ಮುಂಬೈ, ಫೆ. 21, 2021 (ಕರಾವಳಿ ಟೈಮ್ಸ್) : ಕೊರೋನಾ ರೂಪಾಂತರಿ ಮಾದರಿ ದೇಶದಲ್ಲಿ ತನ್ನ ಕಬಂಧಬಾಹು ವಿಸ್ತರಿಸುತ್ತಿದ್ದು, ವಿವಿಧ ರಾಜ್ಯಗಳಲ್ಲಿ ಈಗಾಗಲೇ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ರೂಪಾಂತರಿ ಕೊರೋನಾ ವೈರಸ್ ಹಾವಳಿ ತೀವ್ರಗೊಂಡಿದೆ. ಈ ನಡುವೆ ಸೋಂಕು ಜಾಸ್ತಿಯಾಗಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರಕಾರ ಅಮರಾವತಿ ಜಿಲ್ಲೆಯಲ್ಲಿ ಒಂದು ವಾರ ಕಾಲ ಮತ್ತೆ ಲಾಕ್‍ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಅಮರಾವತಿ ಜಿಲ್ಲೆಯಲ್ಲಿ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರ ಈ ಆದೇಶ ಹೊರಡಿಸಿದ್ದು, ಅಗತ್ಯ ವಸ್ತುಗಳ ಹೊರತುಪಡಿಸಿ ಇತರ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿರುವ ಸಚಿವೆ ಯಶೋಮತಿ ಠಾಕೂರ್ ಜನ ಸರಕಾರದ ಕಠಿಣ ನಿಯಮ ಉಲ್ಲಂಘಿಸಿದರೆ ಮತ್ತೆ ಲಾಕ್‍ಡೌನ್ ವಿಸ್ತರಿಸಲಾಗುವುದು ಹಾಗೂ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ರಾಜ್ಯಗಳಿಂದ ಬರುವ ಮಂದಿಯ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಕಡ್ಡಾಯ ಎಂದು ಸಾರಿರುವ ಕರ್ನಾಟಕ ಸರಕಾರ ವಿದೇಶಗಳಿಂದ ಬರುವವರಿಗೂ ಕಡ್ಡಾಯ ಟೆಸ್ಟ್ ಮಾಡುವಂತೆ ತಾಕೀತು ಮಾಡಿದೆ.
  • Blogger Comments
  • Facebook Comments

0 comments:

Post a Comment

Item Reviewed: ರೂಪಾಂತರಿ ಕೊರೋನಾ ಅಟ್ಟಹಾಸ : ಅಮರಾವತಿ ಜಿಲ್ಲೆಯಲ್ಲಿ 1 ವಾರ ಲಾಕ್‍ಡೌನ್ ಘೋಷಿಸಿದ ಮಹಾ ಸರಕಾರ Rating: 5 Reviewed By: karavali Times
Scroll to Top