ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಸಚಿವ ಅಶ್ವಥನಾರಾಯಣ : ಜುಲೈ 7, 8 ರಂದು ಸಿಇಟಿ ಪರೀಕ್ಷೆ - Karavali Times ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಸಚಿವ ಅಶ್ವಥನಾರಾಯಣ : ಜುಲೈ 7, 8 ರಂದು ಸಿಇಟಿ ಪರೀಕ್ಷೆ - Karavali Times

728x90

20 February 2021

ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಸಚಿವ ಅಶ್ವಥನಾರಾಯಣ : ಜುಲೈ 7, 8 ರಂದು ಸಿಇಟಿ ಪರೀಕ್ಷೆ

ಬೆಂಗಳೂರು, ಫೆ. 20, 2021 (ಕರಾವಳಿ ಟೈಮ್ಸ್) : ಪ್ರಸಕ್ತ ಶೈಕ್ಷಣಿಕ ವರ್ಷದ ಅಂದರೆ 2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜುಲೈ 7 ಮತ್ತು 8 ರಂದು ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದ್ದು, ಪರೀಕ್ಷಾ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದಾರೆ. ಜುಲೈ 7 ರಂದು ಬುಧವಾರ ಬೆಳಗ್ಗೆ 10.30 ರಿಂದ 11.50ರವರೆಗೆ ಜೀವವಿಜ್ಞಾನ, ಅದೇ ದಿನ ಮಧ್ಯಾಹ್ನ 2.30 ರಿಂದ 3.50ರವರೆಗೆ ಗಣಿತ, ಜುಲೈ 8 ರಂದು ಗುರುವಾರ ಬೆಳಗ್ಗೆ 10.30 ರಿಂದ 11.50ರವರೆಗೆ ಭೌತ ವಿಜ್ಞಾನ, ಅದೇ ದಿನ ಮಧ್ಯಾಹ್ನ 2.30 ರಿಂದ 3.50ರವರೆಗೆ ರಸಾಯನ ವಿಜ್ಞಾನ ಪರೀಕ್ಷೆಗಳು ನಡೆಯಲಿದ್ದು, ಜುಲೈ 9 ರಂದು ಶುಕ್ರವಾರ ಬೆಳಗ್ಗೆ 11.30 ರಿಂದ 12.30 ರವರೆಗೆ ಕನ್ನಡ ಪರೀಕ್ಷೆ (ಬೆಂಗಳೂರಿನಲ್ಲಿ ಮಾತ್ರ) ನಡೆಯಲಿದೆ ಎಂದು ಸಚಿವರು ಪ್ರಕಟಿಸಿದ್ದಾರೆ. ಕನ್ನಡ ಪರೀಕ್ಷೆಯನ್ನು ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳು ಬರೆಯಲಿದ್ದಾರೆ ಎಂದ ಸಚಿವ ಅಶ್ವತ್ಥನಾರಾಯಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯ, ಯೋಗ ಮತ್ತು ನ್ಯಾಚುರೋಪಥಿ, ಬಿ ಫಾರ್ಮ, ಫಾರ್ಮ-ಡಿ ಸಹಿತ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಈ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ, ಸಿಬಿಎಸ್‍ಸಿ 12ನೇ ತರಗತಿ ಪರೀಕ್ಷೆ ಹಾಗೂ ಇತರೆ ರಾಜ್ಯಗಳ ಸಿಇಟಿ ಪರೀಕ್ಷೆಗಳ ವೇಳಾಪಟ್ಟಿ ಗಮನದಲ್ಲಿರಿಸಿ ರಾಜ್ಯದ ಸಿಇಟಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಡಾ. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ. ರಾಜ್ಯದ ದ್ವಿತೀಯ ಪಿಯಸಿ ಪರೀಕ್ಷೆ ಮೇ 24 ರಿಂದ ಜೂನ್ 10 ರವರೆಗೆ, ಸಿಬಿಎಸ್‍ಸಿ 12ನೇ ತರಗತಿ ಪರೀಕ್ಷೆ ಮೇ 4 ರಿಂದ ಜೂನ್ 2 ರವರೆಗೆ, ಪಶ್ಚಿಮ ಬಂಗಾಳದ ಸಿಇಟಿ ಜುಲೈ 11 ರಂದು, ಜೆಇಇ (ಮೇನ್) ಫೆಬ್ರವರಿ 23 ರಿಂದ ಮೇ 28 ರವರೆಗೆ, ನೀಟ್ ಪರೀಕ್ಷೆ ಜುಲೈನಲ್ಲಿ, ಜೆಇಇ (ಅಡ್ವಾನ್ಸ್) ಜುಲೈ 3, ಗೋವಾ ಸಿಇಟಿ ಮೇ ನಾಲ್ಕನೇ ವಾರದಲ್ಲಿ, ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ 14 ರಿಂದ ಜೂನ್ 25 ರವರೆಗೆ ನಡೆಯಲಿದೆ. ಈ ಎಲ್ಲ ವೇಳಾಪಟ್ಟಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಸಿಇಟಿ ಪರೀಕ್ಷೆ ವೇಳಾಪಟ್ಟಿ ತಯಾರಿಸಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಸಚಿವ ಅಶ್ವಥನಾರಾಯಣ : ಜುಲೈ 7, 8 ರಂದು ಸಿಇಟಿ ಪರೀಕ್ಷೆ Rating: 5 Reviewed By: karavali Times
Scroll to Top