ಬೆಂಗಳೂರು, ಫೆ. 21, 2021 (ಕರಾವಳಿ ಟೈಮ್ಸ್) : ಕಾನ್ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿರುದ್ಧ ಫೆ. 26 ರಂದು ಭಾರತ ಬಂದ್‍ಗೆ ಕರೆ ನೀಡಿದ್ದು, ಈ ಬಂದ್‍ಗೆ ಭಾರತದ ರಸ್ತೆ ಸಾರಿಗೆ ವಲಯದ ಅತ್ಯುನ್ನತ ಸಂಸ್ಥೆ ಆಲ್-ಇಂಡಿಯಾ ಟ್ರಾನ್ಸ್ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಶ£ ï(ಎಐಟಿಡಬ್ಲ್ಯುಎ) ಬೆಂಬಲ ಘೋಷಿಸುವ ಮೂಲಕ ಬಂದ್ ಯಶಸ್ವಿಗೊಳಿಸುವುದಾಗಿ ತಿಳಿಸಿದೆ. ಛಕ್ಕಾ ಜಾಮ್ ಅಥವಾ ರಸ್ತೆ ತಡೆ ನಡೆಸಲು ಈ ಮೂಲಕ ನಿರ್ಧರಿಸಲಾಗಿದೆ.
ಇಂಧನ ದರ ಏರಿಕೆ ಮತ್ತು ಕೇಂದ್ರ ಸರಕಾರದ ನೂತನ ಇ-ವೇ ಬಿಲ್ ಕಾನೂನು ವಿರುದ್ಧ ಎಐಟಿಡಬ್ಲ್ಯುಎ ಕರೆ ನೀಡಿರುವ ಒಂದು ದಿನದ ಸಾರಿಗೆ ಅಸಹಕಾರಕ್ಕೆ ರಾಜ್ಯ ಮಟ್ಟದ ಎಲ್ಲ ಸಾರಿಗೆ ಸಂಘಗಳು ಬೆಂಬಲ ನೀಡುವ ಬಗ್ಗೆ ಘೋಷಿಸಿಕೊಂಡಿದೆ.
ಬಂದ್ ದಿನ ಎಲ್ಲ ಬುಕ್ಕಿಂಗ್ ತಿರಸ್ಕರಿಸುವುದು ಮತ್ತು ಇ-ವೇ ಬಿಲ್ ಕೇಂದ್ರಿತ ಸರಕುಗಳ ಸಾಗಾಣಿಕೆಯನ್ನು ಒಂದು ದಿನ ತಿರಸ್ಕರಿಸಲು ತೀರ್ಮಾನಿಸಲಾಗಿದೆ. ಎಲ್ಲ ಸಾರಿಗೆ ಕಂಪೆನಿಗಳು ಸಾಂಕೇತಿಕ ಪ್ರತಿಭಟನಾರ್ಥವಾಗಿ ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ಟ್ರಕ್‍ಗಳನ್ನು ನಿಲ್ಲಿಸಲು ಕೋರಲಾಗಿದೆ. ಎಲ್ಲ ಸಾರಿಗೆ ಗೋದಾಮುಗಳು ಪ್ರತಿಭಟನೆ ಬ್ಯಾನರ್‍ಗಳನ್ನು ಪ್ರದರ್ಶಿಸಲಿವೆ ಎಂದು ಸಾರಿಗೆ ಸಂಸ್ಥೆಗಳು ಹೇಳಿವೆ.
ಫೆ. 26 ರಂದು ಯಾವುದೇ ಸರಕು ಸಾಗಾಣಿಕೆ ಬುಕ್ಕಿಂಗ್ ಮಾಡದಂತೆ ಅಥವಾ ಲೋಡ್ ಮಾಡದಂತೆ ಎಲ್ಲ ಗ್ರಾಹಕರಿಗೆ ಸಾರಿಗೆ ಕಂಪೆನಿಗಳು ಮನವಿ ಮಾಡಿಕೊಳ್ಳಲಿವೆ ಎಂದು ಎಐಟಿಡಬ್ಲ್ಯುಎ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
21 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment