ಬಂಟ್ವಾಳ, ಫೆ. 18, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಎಂಬಲ್ಲಿ ಸರಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಲು ಬಂದ ಸ್ಥಳೀಯ ಖಾಸಗಿ ವ್ಯಕ್ತಿಗಳು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ವಿರುದ್ದ ಹರಿಹಾಯ್ದ ಘಟನೆ ಬುಧವಾರ ನಡೆದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಗ್ಲೆಗುಡ್ಡೆಯ ಸರ್ವೆ ನಂಬ್ರ 29/3ಎಕ್ಕೊಪ್ಪಿದ ಸರಕಾರಿ ಜಾಗದಲ್ಲಿ 1999-2000ನೇ ಇಸವಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಸರಕಾರಿ ಜಾಗದ ಮೇಲೆ ನಿರಂತರವಾಗಿ ಹಕ್ಕು ಸ್ಥಾಪಿಸಲು ಯತ್ನಿಸುತ್ತಿರುವ ಸ್ಥಳೀಯ ನಿವಾಸಿ ದಿವಂಗತ ನಾರಾಯಣ ಮಯ್ಯ ಅವರ ಮಕ್ಕಳು ಕಳೆದ ಹಲವು ಸಮಯಗಳಿಂದ ಅಂಗನವಾಡಿ ಹಾಗೂ ಸಮೀಪದಲ್ಲೇ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್ ಕಟ್ಟಡದ ಅಭಿವೃದ್ದಿಗೂ ಅಡ್ಡಿಪಡಿಸುವ ಕಾರ್ಯ ನಡೆಸುತ್ತಾ ಬರುತ್ತಿದ್ದಾರೆ ಎಂದು ದೂರಲಾಗಿದೆ. ಬುಧವಾರ ಇಲ್ಲಿನ ಅಂಗನವಾಡಿ ಕೇಂದ್ರದ ದಾರಿಗೆ ಎರಡೂ ಕಡೆಗಳಲ್ಲಿ ಕೆಂಪು ಕಲ್ಲು ಅಡ್ಡಲಾಗಿ ಇಟ್ಟು ಮಯ್ಯ ಸಹೋದರರು ಅಡ್ಡಿಪಡಿಸಿದ್ದಾರೆ. ಈ ಸಂದರ್ಭ ಪ್ರಶ್ನಿಸಿದ ಅಂಗನವಾಡಿ ಕಾರ್ಯಕರ್ತೆ ಪ್ರೇಮಾ ಹಾಗೂ ಸಹಾಯಕಿ ವಿರುದ್ದ ರಂಪಾಟ ಮಾಡಿದ ಸುದೇಶ್ ಮಯ್ಯ, ರವಿಚಂದ್ರ ಮಯ್ಯ ಹಾಗೂ ಯೋಗೀಶ್ ಮಯ್ಯ ಸಹಿತ ನಾಲ್ಕೈದು ಮಂದಿ ಸಹೋದರರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಸರಕಾರಿ ಜಾಗದ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಸ್ಥಳೀಯ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪುರಸಭಾ ಸದಸ್ಯಗೂ ಮಯ್ಯ ಸಹೋದರರು ಹೀನಾಯವಾಗಿ ನಿಂದಿಸಿದ್ದಾರೆ. ಬಳಿಕ ಪುರಸಭಾ ಸದಸ್ಯನ ಮಾಹಿತಿ ಮೇರೆಗೆ ಪೆÇಲೀಸರು ಸ್ಥಳಕ್ಕಾಗಮಿಸಿದಾಗ ಮಯ್ಯ ಸಹೋದರರು ತಮ್ಮ ರಂಪಾಟ ಸಮರ್ಥಿಸಲು ಹಸಿರು ಶಾಲು ಹೆಗಲಿಗೇರಿಸಿಕೊಂಡು ನಾವು ರೈತರು ಎಂದು ತೋರಿಸುವ ಪ್ರಯತ್ನ ನಡೆಸಿದ್ದು, ಈ ಸಂದರ್ಭ ಪೆÇಲೀಸರೆದುರು ಸ್ಥಳೀಯರು ತರಾಟೆಗೆಳೆದ ಪ್ರಸಂಗವೂ ನಡೆಯಿತು. ಬಳಿಕ ಘಟನೆಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆಯ ಅಹವಾಲಿನ ಮೇರೆಗೆ ಬಂಟ್ವಾಳ ಶಿಶು ಯೋಜನಾಧಿಕಾರಿ ಬಂಟ್ವಾಳ ನಗರ ಠಾಣೆಗೆ ಲಿಖಿತ ದೂರು ನೀಡಿದ್ದು, ಆರೋಪಿಗಳ ವಿರುದ್ದ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. ದೂರು ಸ್ವೀಕರಿಸಿರುವ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲೂ ಇದೇ ಮಯ್ಯ ಸಹೋದರರು ಅಡ್ಡಿ ಪಡಿಸಿದ್ದರು. ಅಲ್ಲದೆ ಇತ್ತೀಚೆಗೆ ಸರಕಾರಿ ಜಾಗದಲ್ಲಿರುವ ಮರಗಳನ್ನು ಕಡಿದು ಮಾರಾಟ ಮಾಡಲು ಯತ್ನಿಸಿದ ಬಗ್ಗೆಯೂ ಸ್ಥಳೀಯರು ಇವರ ವಿರುದ್ದ ಅರಣ್ಯ ಇಲಾಖಾಧಿಕಾರಿಗಳಿಗೆ ದೂರಿಕೊಂಡಿದ್ದರು.
18 February 2021
Subscribe to:
Post Comments (Atom)
PANEMANGALORINA PRASIDDA SARAKARI JAMINU GULUM SWAHA GANG... 😀😀😀
ReplyDelete