ನವದೆಹಲಿ, ಫೆ. 15, 2021 (ಕರಾವಳಿ ಟೈಮ್ಸ್) : ಅಜ್ಮೀರ್ ಖ್ವಾಜಾ ಗರೀಬ್ ನವಾಝ್ ದರ್ಗಾ ಷರೀಫ್ ನಲ್ಲಿ ನಡೆಯುವ 809ನೇ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರೂಸ್ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚಾದರ್ ಹಸ್ತಾಂತರಿಸಿದರು ಎಂದು ಸೋಮವಾರ ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ 809ನೇ ಉರೂಸ್ ಕಾರ್ಯಕ್ರಮದ ಪ್ರಯುಕ್ತ ದರ್ಗಾ ಶರೀಫ್ ಗೆ ಹಾಸಲು ಚಾದರನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ಪ್ರಧಾನಿ ಮೋದಿ ಹಸ್ತಾಂತರಿಸಿದ್ದಾರೆ.
ಪ್ರಧಾನಿ ಮೋದಿಯವರ ಪರವಾಗಿ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ರಾಜಸ್ಥಾನದಲ್ಲಿರುವ ಅಜ್ಮೀರ್ ಶರೀಫ್ ದರ್ಗಾಗೆ ಭೇಟಿ ನೀಡಿ ಚಾದರ ಅರ್ಪಿಸಲಿದ್ದಾರೆ ಎಂದು ತಿಳಿಸಿದೆ.
15 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment