ಬೆಂಗಳೂರು, ಫೆ. 12, 2021 (ಕರಾವಳಿ ಟೈಮ್ಸ್) : ಈ ಬಾರಿಯ ಅಂದರೆ 2020-21ನೇ ಶೈಕ್ಷಣಿಕ ವರ್ಷದ ದ್ವೀತಿಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪಿಯು ಬೋರ್ಡ್ ಶುಕ್ರವಾರ ಪ್ರಕಟಿಸಿದ್ದು, ಮೇ 24 ರಿಂದ ಜೂನ್ 16ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಸಿಸಿದ್ದಾರೆ.
ಇತ್ತೀಚೆಗಷ್ಟೆ ಪಿಯುಸಿ ವಾರ್ಸಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದ ಪಿಯು ಬೋರ್ಡ್ ಆಕ್ಷೇಪಣೆಗೆ ಅವಕಾಶ ನೀಡಿತ್ತು. ಇದೀಗ ಆಕ್ಷೇಪಣೆ ಅವಧಿ ಮುಕ್ತಾಯಗೊಂಡ ಬಳಿಕ ಆಕ್ಷೇಪಣೆ ಪರಿಶೀಲನೆ ನಡೆಸಿ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮೇ 24 ರಂದು ಇತಿಹಾಸ, 25 ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, 26 ರಂದು ಭೂಗೋಳ ಶಾಸ್ತ್ರ, 27 ರಂದು ಮನಃಶಾಸ್ತ್ರ, ಬೇಸಿಕ್ ಗಣಿತ, 28 ರಂದು ತರ್ಕಶಾಸ್ತ್ರ, 29 ರಂದು ಹಿಂದಿ, 31 ರಂದು ಇಂಗ್ಲಿಷ್, ಜೂನ್ 1 ರಂದು ಮಾಹಿತಿ ತಂತ್ರಜ್ಞಾನ, ಹೆಲ್ತ್‍ಕೇರ್, ವೆಲ್‍ನೆಸ್ ಬ್ಯೂಟಿ, 2 ರಂದು ರಾಜ್ಯಶಾಸ್ತ್ರ, ಗಣಕ ವಿಜ್ಞಾನ, 3 ರಂದು ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, 4 ರಂದು ಅರ್ಥಶಾಸ್ತ್ರ, 5 ರಂದು ಗೃಹ ವಿಜ್ಞಾನ, 7 ರಂದು ವ್ಯವಹಾರ ಅಧ್ಯಯನ, ಭೌತಶಾಸ್ತ್ರ, 8 ರಂದು ಐಚ್ಛಿಕ ಕನ್ನಡ, 9 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್, 10 ರಂದು ಸಮಾಜ ಶಾಸ್ತ್ರ, ರಸಾಯನಶಾಸ್ತ್ರ, 11 ರಂದು ಉರ್ದು, ಸಂಸ್ಕೃತ, 12 ರಂದು ಸಂಖ್ಯಾಶಾಸ್ತ್ರ, 14 ರಂದು ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ ಶಾಸ್ತ್ರ, 15 ರಂದು ಭೂಗರ್ಭಶಾಸ್ತ್ರ ಹಾಗೂ ಜೂನ್ 16 ರಂದು ಕನ್ನಡ ಭಾಷಾ ಪರೀಕ್ಷೆಗಳು ನಡೆಯಲಿದೆ ಎಂದು ಪಿಯು ಬೋರ್ಡ್ ತಿಳಿಸಿದೆ.
12 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment