ಬಂಟ್ವಾಳ, ಜ. 09, 2021 (ಕರಾವಳಿ ಟೈಮ್ಸ್) : ನಮ್ಮ ಮಕ್ಕಳು ಶೈಕ್ಷಣಿಕ ರಂಗದಲ್ಲಿ ಮುಂದುವರೆಯಲು ಪ್ರತಿ ಮೊಹಲ್ಲಾಗಳು ಜವಾಬಾರಿಯುತ ಕಾರ್ಯ ನಿರ್ವಹಿಸಬೇಕು ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.
ಪಾಣೆಮಂಗಳೂರು ಸಮೀಪದ ನೆಹರುನಗರ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆದ ಸೆಮಿನಾರ್ ಹಾಗೂ ಅನುಸ್ಮರಣ ಕಾರ್ಯಕ್ರಮದಲ್ಲಿ ಜಿಲ್ಲೆಯ ಖಾಝಿಗಳಾದ ಮರ್‍ಹೂಂ ಶೈಖುನಾ ಕೋಟ ಉಸ್ತಾದ್ ಹಾಗೂ ಮರ್‍ಹೂಂ ಸಿ.ಎಂ. ಉಸ್ತಾದ್ ಅವರ ಜೀವನ ಚರಿತ್ರೆ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅರ್ಶದೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ಯು. ರಹ್ಮಾನ್ ಅರ್ಶದಿ ಕೋಲ್ಪೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಅಕ್ರಮ್ ಅಲೀ ರಹ್ಮಾನಿ ತಂಙಳ್ ಉದ್ಘಾಟಿಸಿದರು. ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣಗೈದರು.
ಸಯ್ಯಿದ್ ಬುರ್ಹಾನ್ ತಂಙಳ್ ಅಲ್-ಬುಖಾರಿ ಕಾಸರಗೋಡು, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ನೆಹರು ನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಮೌಲಾನಾ ಅಬ್ದುರ್ರಝಾಕ್ ಹಾಜಿ ಮಲೇಶಿಯಾ ಕಬಕ, ದಾರುನ್ನೂರ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ, ಫಕೀರಪ್ಪ ಮಾಸ್ಟರ್ ದಾರುನ್ನೂರ್, ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ಹಕೀಂ ಪರ್ತಿಪ್ಪಾಡಿ, ಅಬ್ದುಲ್ ರಹಿಮಾನ್ ಫೈಝಿ, ಸಂಸುದ್ದೀನ್ ಹನೀಫಿ, ಸಲೀಂ ನೆಹರು ನಗರ ಮೊದಲಾದವರು ಭಾಗವಹಿಸಿದ್ದರು. ಹಸ್ಸನ್ ಅರ್ಶದಿ ಬೆಳ್ಳಾರೆ ಪ್ರಸ್ತಾವನೆಗೈದರು. ಸಲೀಂ ಅರ್ಶದಿ ದೆಮ್ಮಲೆ ಕೃತಿ ಪರಿಚಯ ಮಾಡಿದರು.
9 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment