ಮಂಗಳೂರು, ಜ. 10, 2021 (ಕರಾವಳಿ ಟೈಮ್ಸ್) : ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಚುನಾವಣೆಗೆ ಒಂದೆರಡು ದಿನ ಬಾಕಿ ಇರುತ್ತಲೇ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಶನಿವಾರ ತಮ್ಮ ನಾಮಪತ್ರ ವಾಪಸ್ ಪಡೆದಿದ್ದು, ಚುನಾವಣಾ ಕಣದಿಂದ ಹಠಾತ್ ಆಗಿ ನಿರ್ಮಿಸಿದ್ದಾರೆ. ಮಿಥುನ್ ಅವರ ಈ ಹಠಾತ್ ನಿರ್ಧಾರ ಇದೀಗ ಕಾಂಗ್ರೆಸ್ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಸಂಬಂಧ ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಿಥುನ್ ರೈ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಲಹೆಯ ಮೇರೆಗೆ ನಾಮಪತ್ರ ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
"ಆತ್ಮೀಯ ಯುವ ಕಾಂಗ್ರೆಸ್ ಕಾರ್ಯಕರ್ತರೇ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಚುನಾವಣೆ 2021 ರ ಜನವರಿ 10, 11 ಮತ್ತು 12 ರಂದು ನಡೆಯಲಿದೆ. ನಾನು ಡಿ ಕೆ ಶಿವಕುಮಾರ್ ಅವರ ಆಪ್ತನಾಗಿದ್ದು, ಅವರ ನಿರ್ದೇಶನದಂತೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಿಂದ ನನ್ನ ನಾಮಪತ್ರ ವಾಪಸ್ ಪಡೆದುಕೊಂಡಿದ್ದೇನೆ, ನೀವೆಲ್ಲರೂ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದಾರೆ.
ಮಿಥುನ್ ಹೊರತುಪಡಿಸಿ ಬೆಂಗಳೂರಿನಿಂದ ಶಾಸಕ ಎನ್ ಎ ಹಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ರಕ್ಷಾ ರಾಮಯ್ಯ, ಎಚ್ ಎಸ್ ಮಂಜುನಾಥ್, ಸಂದೀಪ್ ನಾಯಕ್, ಮೊಹಮ್ಮದ್ ಖಾಲಿದ್ ಹಾಗೂ ಏಕೈಕ ಮಹಿಳಾ ಸ್ಪರ್ಧಿ ಭವ್ಯಾ ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
9 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment