ಕೋವಿಡ್ ಹಿನ್ನಲೆಯಲ್ಲಿ ಈ ಬಾರಿ ಜನವರಿ 12 ರಂದು ಆನ್ ಲೈನ್ ಮತದಾನ
ಬೆಂಗಳೂರು, ಜ. 08, 2021 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ನಡೆಯುವ ಆಂತರಿಕ ಚುನಾವಣೆ ಇದೀಗ ತೀವ್ರ ಪೈಪೆÇೀಟಿಯ ಹಂತಕ್ಕೆ ತಲುಪಿದ್ದು, ನಾಲ್ಕು ಮಂದಿ ಅಭ್ಯರ್ಥಿಗಳು ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಕಣದಲ್ಲಿದ್ದಾರೆ. ನಾಲ್ಕೂ ಮಂದಿ ಕೂಡಾ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದು, ಯಾರ ಮಡಿಲಿಗೆ ಅಧ್ಯಕ್ಷ ಸ್ಥಾನ ಒಲಿದು ಬರಲಿದೆ ಎಂಬುದು ತೀವ್ರ ಕುತೂಹಲದ ಸಂಗತಿಯಾಗಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಗೆ ಡಿಸೆಂಬರ್ 31 ರಂದು ನಾಮಪತ್ರ ಸಲ್ಲಿಕೆ ಅಂತ್ಯಗೊಂಡಿದ್ದು, ಗುರುವಾರ (ಜನವರಿ 7) ನಾಮಪತ್ರ ಪರಿಶೀಲನೆ ಕೂಡಾ ನಡೆದಿದೆ. ಜನವರಿ 12 ರಂದು ಚುನಾವಣೆ ನಡೆಯಲಿದೆ. ಕೋವಿಡ್ ಕಾರಣಕ್ಕಾಗಿ ಈ ಬಾರಿ ಆನ್‍ಲೈನ್‍ನಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಇರುವ ಒಟ್ಟು 4.50 ಲಕ್ಷ ಸದಸ್ಯರು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇದೀಗ ಎನ್‍ಎಸ್‍ಯುಐ ಅಧ್ಯಕ್ಷ ಎಚ್ ಎಸ್ ಮಂಜುನಾಥ್ ಗೌಡ, ಮಾಜಿ ಸಚಿವ ಎಂ ಆರ್ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ, ಶಾಸಕ ಎನ್ ಎ ಹ್ಯಾರಿಸ್ ಅವರ ಪುತ್ರ ಮುಹಮ್ಮದ್ ನಲಪಾಡ್ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿಯಾಗಿದ್ದ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರುಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಎಚ್ ಎಸ್ ಮಂಜುನಾಥ್ ಗೌಡ ಹಾಗೂ ಮುಹಮ್ಮದ್ ನಲಪಾಡ್ ನಡುವೆ ತೀವ್ರ ಪೈಪೆÇೀಟಿ ಇದೆ ಎನ್ನಲಾಗುತ್ತಿದೆ. ಉಳಿದಂತೆ ಭವ್ಯಾ, ಸೈಯದ್ ಖಾಲಿದ್ ಹಾಗೂ ಸಂದೀಪ ಅವರುಗಳೂ ಕೂಡಾ ಕಣದಲ್ಲಿದ್ದಾರೆ.
ಸದ್ಯ ಬೆಂಗಳೂರಿನ ಬಿ ವಿ ಶ್ರೀನಿವಾಸ್ ಅವರು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಈ ಬಾರಿ ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆನ್ ಲೈನ್ ಮತದಾನದ ಮೊರೆ ಹೋಗಲಾಗಿದೆ ಎನ್ನಲಾಗಿದೆ.
ಈಗಾಗಲೇ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ಅನೇಕ ಮಂದಿ ರಾಜ್ಯ ಹಾಗೂ ಕೇಂದ್ರದಲ್ಲಿ ಸಚಿವರಾಗಿದ್ದಲ್ಲದೆ ಪಕ್ಷದ ವಿವಿಧ ಉನ್ನತ ಹುದ್ದೆಗಳಲ್ಲೂ ಕಾರ್ಯನಿರ್ವಹಿಸುವ ಅವಕಾಶ ಪಡೆದಿದ್ದಾರೆ. ಈ ಹಿನ್ನಲೆಯಲ್ಲಿ ಪಕ್ಷದ ಈ ಆಂತರಿಕ ಚುನಾವಣೆಯಾದರೂ ಕಾಂಗ್ರೆಸ್ ನಾಯಕರು ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸುವುದರ ಜೊತೆಗೆ ಗಂಭೀರವಾಗಿ ಪರಿಗಣಿಸಿದ್ದಾರೆ. ನೇರ ಚುನಾವಣೆ ನಡೆಸಿ ಪ್ರಜಾಪ್ರಭುತ್ವವನ್ನು ಜೀವಂತವಾಗಿಡಬೇಕು ಎಂಬುದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರ ದೃಷ್ಟಿಕೋನ. ಈ ಚುನಾವಣೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಲಾಗುವುದು. ಮತದಾರರು ಯುವ ಕಾಂಗ್ರೆಸ್‍ನಲ್ಲಿ ಸದಸ್ಯರಾಗಿ ಸೇರಿಕೊಂಡವರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ತಿಳಿಸುತ್ತಾರೆ.
ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಕೇರಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ಯುವ ಕಾಂಗ್ರೆಸ್ ಪೂರ್ಣಗೊಳಿಸಿದೆ. ಹಿಮಾಚಲ ಪ್ರದೇಶದಲ್ಲಿ ಯಾವುದೇ ಚುನಾವಣೆ ನಡೆಯಲಿಲ್ಲ, ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ನೋಂದಾಯಿಸುವಲ್ಲಿ ಯಶಸ್ವಿಯಾದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಕೇರಳದಲ್ಲಿ, ಶಾಸಕರನ್ನು ಐವೈಸಿ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಮಾಡಲಾಯಿತು.
0 comments:
Post a Comment