ಬೆಂಗಳೂರು, ಜ 05, 2021 (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಹಾಗೂ ಲಾಕ್‍ಡೌನ್ ಕಾರಣದಿಂದ ಕಳೆದ ಏಳೆಂಟು ತಿಂಗಳುಗಳಿಂದ ಬಾಗಿಲು ಹಾಕಿದ್ದ ಶಾಲಾ-ಕಾಲೇಜು ತರಗತಿಗಳು ಜನವರಿ 1 ರಿಂದ ತಾತ್ಕಾಲಿಕವಾಗಿ ಪುನರಾರಂಭಗೊಂಡಿದ್ದು, ಜನವರಿ 4 ರಂದು ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಏರಿಕೆ ಕಂಡುಬಂದಿದೆ.
ಶಾಲಾ-ಕಾಲೇಜುಗಳಿಗೆ ಹಾಜರಾಗಲು ಹೆದರುತ್ತಿದ್ದ ವಿದ್ಯಾರ್ಥಿಗಳು ಕೊನೆಗೂ ತರಗತಿಗಳತ್ತ ಧಾವಿಸಲು ಅರಂಭಿಸಿದ್ದಾರೆ. ಶಾಲಾ-ಕಾಲೇಜು ತೆರೆದ 3ನೇ ದಿನ ಪಿಯುಸಿ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಏರಿಕೆ ಕಂಡುಬಂದಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದ ಪಿಯು ಕಾಲೇಜುಗಳಲ್ಲಿ ಹಾಜರಾತಿ ಶೇ.55ಕ್ಕೇರಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಸ್ನೇಹಲ್ ಆರ್ ಅವರು, ರಾಜ್ಯಾದ್ಯಂತ 5492 ಪಿಯು ಕಾಲೇಜುಗಳಲ್ಲಿ 3,62,704 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಅಂತೆಯೇ 1,99,553 ವಿದ್ಯಾರ್ಥಿಗಳು (55.018 ಪಿಸಿ) ಆಫ್‍ಲೈನ್ ತರಗತಿಗಳಿಗೆ ಹಾಜರಾಗಿದ್ದರು ಎಂದಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಪ್ರತಿಕ್ರಯಿಸಿ, ವಿದ್ಯಾಗಮ ತರಗತಿಗಳನ್ನು ಸುರಕ್ಷಿತ ವಾತಾವರಣದಲ್ಲಿ ನಡೆಸಲಾಗುತ್ತಿದ್ದು, ದೈಹಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ರಾಜ್ಯಾದ್ಯಂತ 5,492 ಪಿಯು ಕಾಲೇಜುಗಳಲ್ಲಿ ದಾಖಲಾದ 3,62,704 ವಿದ್ಯಾರ್ಥಿಗಳ ಪೈಕಿ 1,99,553 ವಿದ್ಯಾರ್ಥಿಗಳು (55%) ಸೋಮವಾರ ಆಫ್‍ಲೈನ್ ತರಗತಿಗಳಿಗೆ ಹಾಜರಾಗಿದ್ದರು. ಅಂತೆಯೇ, 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾದ 9,29,130 ವಿದ್ಯಾರ್ಥಿಗಳ ಪೈಕಿ 4,81,728 ವಿದ್ಯಾರ್ಥಿಗಳು (51.95%) ತರಗತಿಗಳಿಗೆ ಹಾಜರಾಗಿದ್ದಾರೆ. 9ನೇ ತರಗತಿಯ 4,71,823 ವಿದ್ಯಾರ್ಥಿಗಳು ಸೋಮವಾರ ವಿದ್ಯಾಗಮ ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಆನ್‍ಲೈನ್ ತರಗತಿಗಳ ಸಂದರ್ಭದಲ್ಲಿ ಇಂಟರ್ನೆಟ್ ಸಮಸ್ಯೆಗಳಿಂದಾಗಿ ಕಾಲೇಜಿಗೆ ಬರುವ ಆಯ್ಕೆ ಮಾಡಿರುತ್ತೇವೆ. ತರಗತಿಯ ಮೊದಲ ದಿನ ಹೆಚ್ಚು ಅರ್ಥಮಾಡಿಕೊಂಡಿದ್ದೇವೆ. ಆನ್‍ಲೈನ್ ತರಗತಿಗಳಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯಿದೆ ಎಂದು ವಿದ್ಯಾರ್ಥಿಗಳು ಪ್ರತಿಕ್ರಯಿಸಿದ್ದಾರೆ. ಹಲವಾರು ಕಾಲೇಜುಗಳಲ್ಲಿ ಪ್ರಾಯೋಗಿಕ ತರಗತಿಗಳು ಇನ್ನೂ ಪ್ರಾರಂಭವಾಗಬೇಕಿದೆ. ಪ್ರಾಯೋಗಿಕತೆಗಾಗಿ ಪ್ರಯೋಗಾಲಯಗಳನ್ನು ನಡೆಸುವ ಬಗ್ಗೆ ಇಲಾಖೆಯಿಂದ ಸ್ಪಷ್ಟ ಮಾರ್ಗಸೂಚಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಶಿಕ್ಷಕರು ತಿಳಿಸುತ್ತಾರೆ.
0 comments:
Post a Comment