ಬಂಟ್ವಾಳ, ಜ. 13, 2021 (ಕರಾವಳಿ ಟೈಮ್ಸ್) : ತಾಲೂಕಿನ ಮಾರ್ನಬೈಲು ಸಮೀಪದ ಪೆಲತ್ತಕಟ್ಟೆ ಬಳಿ ಸೋಮವಾರ ನಡೆದ ದ್ವಿಚಕ್ರ ವಾಹನಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಬೊಳ್ಳಾಯಿ ನಿವಾಸಿಗಳಾದ ಇಮ್ರಾನ್ ಇಮ್ರಾನ್ (22) ಹಾಗೂ ಮುಬಶ್ಶಿರ್ (12) ಅವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ.
ಮೂಲತಃ ಕಾಸರಗೋಡು ನಿವಾಸಿ, ಪ್ರಸ್ತು ಬೊಳ್ಳಾಯಿಯಲ್ಲಿ ವಾಸವಾಗಿರುವ ಇಮ್ರಾನ್ ತನ್ನ ಸಂಬಂಧಿ ಬಾಲಕ ಮುಬಶ್ಶಿರ್ ಜೊತೆ ತನ್ನ ಡಿಯೋ ದ್ವಿಚಕ್ರ ವಾಹನದಲ್ಲಿ ಸಜಿಪನಡುಗೆ ತೆರಳುತ್ತಿದ್ದ ವೇಳೆ ಪೆಲತ್ತಕಟ್ಟೆಯಲ್ಲಿ ಎರಡು ಆಕ್ಟಿವಾ ದ್ವಿಚಕ್ರ ವಾಹನಗಳು ಸರಣಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಘಟನೆಯಿಂದ ಡಿಯೋ ವಾಹನದಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿತ್ತು. ಸ್ಥಳೀಯರು ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಇಮ್ರಾನ್ ಮಂಗಳವಾರ ಮಧ್ಯಾಹ್ನ ಮೃತಪಟ್ಟರೆ, ಮುಬಶ್ಶಿರ್ ರಾತ್ರಿ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಉಳಿದ ಸ್ಕೂಟರ್ ಗಳ ಸವಾರರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
12 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment