ಸಾರಿಗೆ ಸಚಿವರ ಖಾಸಗಿ ವಾಹನಕ್ಕೆ ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ನಿಯಮ ಉಲ್ಲಂಘಿಸಿ ಡೀಸೇಲ್ ಹಾಕಿದ ಪ್ರಕರಣ : ಸಿಬ್ಬಂದಿಗೆ ನೊಟೀಸ್ ಜಾರಿಗೊಳಿಸಿದ ನಿಯಂತ್ರಣಾಧಿಕಾರಿ - Karavali Times ಸಾರಿಗೆ ಸಚಿವರ ಖಾಸಗಿ ವಾಹನಕ್ಕೆ ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ನಿಯಮ ಉಲ್ಲಂಘಿಸಿ ಡೀಸೇಲ್ ಹಾಕಿದ ಪ್ರಕರಣ : ಸಿಬ್ಬಂದಿಗೆ ನೊಟೀಸ್ ಜಾರಿಗೊಳಿಸಿದ ನಿಯಂತ್ರಣಾಧಿಕಾರಿ - Karavali Times

728x90

9 January 2021

ಸಾರಿಗೆ ಸಚಿವರ ಖಾಸಗಿ ವಾಹನಕ್ಕೆ ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ನಿಯಮ ಉಲ್ಲಂಘಿಸಿ ಡೀಸೇಲ್ ಹಾಕಿದ ಪ್ರಕರಣ : ಸಿಬ್ಬಂದಿಗೆ ನೊಟೀಸ್ ಜಾರಿಗೊಳಿಸಿದ ನಿಯಂತ್ರಣಾಧಿಕಾರಿ

ಬೆಳಗಾವಿ, ಜ. 10, 2021 (ಕರಾವಳಿ ಟೈಮ್ಸ್) : ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಇಲ್ಲಿನ ಎನ್‌ಡಬ್ಲ್ಯುಕೆಆರ್‌ಟಿಸಿ 3ನೇ ಘಟಕದ ಡಿಪೊದಲ್ಲಿ ಡೀಸೆಲ್ ತುಂಬಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂಧನ ಶಾಖೆಯಲ್ಲಿ ಕಿರಿಯ ಸಹಾಯಕ ಕಿಶೋರ ಬಿ.ಎಸ್. ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಸಿಬ್ಬಂದಿಯ ಅಚಾತುರ್ಯದಿಂದ ಈ ಘಟನೆ ನಡೆದಿದೆ. ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಖಾಸಗಿ ವಾಹನಕ್ಕೆ  ಡೀಸೆಲ್ ಹಾಕಿದ್ದಾರೆ. ಸಂಸ್ಥೆಯ ನಿಯಮಾವಳಿ ಪ್ರಕಾರ ಇಲ್ಲಿ ಖಾಸಗಿ ವಾಹನಕ್ಕೆ ಇಂಧನ ಪೂರೈಸುವುದು ಅಪರಾಧವಾಗಿರುತ್ತದೆ. 44 ಲೀಟಿರ್ ಡೀಸೆಲ್ ಹಾಕುವ ಮೂಲಕ  ನಿಯಮಾವಳಿ ಉಲ್ಲಂಘಿಸಲಾಗಿದೆ. ನಿಷ್ಕಾಳಜಿಯಿಂದ ಕಾರ್ಯನಿರ್ವಹಿಸಿ ಸಂಸ್ಥೆಯ ಘನತೆಗೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಿ  ಶಿಸ್ತು ಕ್ರಮ ಜರುಗಿಸಬಾರದೇಕೆ? 7 ದಿನಗಳ ಒಳಗೆ ಲಿಖಿತ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ್ ಮುಂಜಿ ತಿಳಿಸಿದ್ದಾರೆ. ಡಿಪೊದಲ್ಲಿ ಹಾಕಿಸಿದ ಡೀಸೆಲ್‌ಗೆ ಆದ ಮೊತ್ತವನ್ನು ಸಚಿವರು ತಮ್ಮ ಸಿಬ್ಬಂದಿಯ ಮೂಲಕ ಡೀಸೆಲ್ ತುಂಬಿ ಕೊಟ್ಟ ವ್ಯಕ್ತಿಗೆ ಕೊಟ್ಟಿದ್ದಾರೆ. ಅದನ್ನು ಅವರು ಡಿಪೊಗೆ ಪಾವತಿಸಿದ್ದಾರೆ. ಅವರು ನೋಟಿಸ್‌ಗೆ ವಿವರಣೆ ಕೊಟ್ಟ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು. ಶುಕ್ರವಾರ ಘಟಕದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಸಚಿವರು ಬಂದಿದ್ದ ವೇಳೆ, ಅವರ ಖಾಸಗಿ ಕಾರಿನ (ಕೆಎ 03 ಎನ್.ಎಫ್ 8989) ಚಾಲಕ ಅಲ್ಲಿನ ಡಿಪೊದಿಂದ ಇಂಧನ ಹಾಕಿಸಿಕೊಂಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಸಂಸ್ಥೆಯವರು ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸಾರಿಗೆ ಸಚಿವರ ಖಾಸಗಿ ವಾಹನಕ್ಕೆ ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ನಿಯಮ ಉಲ್ಲಂಘಿಸಿ ಡೀಸೇಲ್ ಹಾಕಿದ ಪ್ರಕರಣ : ಸಿಬ್ಬಂದಿಗೆ ನೊಟೀಸ್ ಜಾರಿಗೊಳಿಸಿದ ನಿಯಂತ್ರಣಾಧಿಕಾರಿ Rating: 5 Reviewed By: karavali Times
Scroll to Top