ಮಂಗಳೂರು, ಜ. 27, 2021 (ಕರಾವಳಿ ಟೈಮ್ಸ್) : ನಗರದ ಪಣಂಬೂರು ಪೆÇೀರ್ಟ್ ಶಾಲಾ ವಿದ್ಯಾರ್ಥಿಗಳಾದ 5ನೇ ತರಗತಿಯ ಸೃಜನ್ ಹಾಗೂ 6ನೇ ತರಗತಿಯ ಶರಣ್ಯಾ ಅವರು ಕಳೆದ ವರ್ಷ ಫೆಬ್ರವರಿ 23 ರಂದು ಮಣ್ಣಗುಡ್ಡದಲ್ಲಿರುವ ಗಾಂಧಿನಗರ ಅಂಚೆ ಕಛೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಗ್ನಿ ಅನಾಹುತ ಸಂಭವಿಸಿದ ವೇಳೆ ತಕ್ಷಣ ನೆರೆಕರೆಯವರಿಗೆ ಮಾಹಿತಿ ನೀಡಿ ಸಂಭಾವ್ಯ ಭಾರೀ ಅನಾಹುತ ತಪ್ಪಿಸಿದ್ದರು. ಎಳೆಯ ವಿದ್ಯಾರ್ಥಿಗಳ ಸಮಯ ಪ್ರಜ್ಞೆಗಾಗಿ ಅವರನ್ನು ಮಂಗಳೂರು ಅಂಚೆ ವಿಭಾಗವು ಗುರುತಿಸಿ ಸನ್ಮಾನಿಸಿತು.
ನಗರದ ಬಲ್ಮಠ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ಹಾಗೂ ಮೈ ಸ್ಟಾಂಪ್ (ಮಕ್ಕಳ ಭಾವಚಿತ್ರ ಹೊಂದಿರುವ ಸ್ಟಾಂಪ್) ನೀಡಿ ಸನ್ಮಾನಿಸಲಾಯಿತು ಹಾಗೂ ಇವರ ಸಮಯ ಪ್ರಜ್ಞೆ ಸಮಾಜಕ್ಕೆ ಮಾದರಿಯಾಗಿ ನಿರಂತರವಾಗಿ ಮುಂದುವರಿಯಲಿ ಎಂದು ಇದೇ ವೇಳೆ ಅಧಿಕಾರಿಗಳು ಹಾರೈಸಿದರು.
27 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment