ಮಂಗಳೂರು ಖಾಸಗಿ ಬಸ್ಸುಗಳಲ್ಲಿ ಮಿತಿ ಮೀರುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣ : ಡಿಜಿಟಲ್ ಸ್ಟ್ರೈಕ್ ಮೊರೆ ಹೋದ ನಗರದ ಯುವತಿ - Karavali Times ಮಂಗಳೂರು ಖಾಸಗಿ ಬಸ್ಸುಗಳಲ್ಲಿ ಮಿತಿ ಮೀರುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣ : ಡಿಜಿಟಲ್ ಸ್ಟ್ರೈಕ್ ಮೊರೆ ಹೋದ ನಗರದ ಯುವತಿ - Karavali Times

728x90

16 January 2021

ಮಂಗಳೂರು ಖಾಸಗಿ ಬಸ್ಸುಗಳಲ್ಲಿ ಮಿತಿ ಮೀರುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣ : ಡಿಜಿಟಲ್ ಸ್ಟ್ರೈಕ್ ಮೊರೆ ಹೋದ ನಗರದ ಯುವತಿ

ಮಂಗಳೂರು, ಜ. 16, 2021 (ಕರಾವಳಿ ಟೈಮ್ಸ್) : ಜಿಲ್ಲೆಯ ಖಾಸಗಿ ಬಸ್ಸುಗಳಲ್ಲಿ ವಿಕೃತ ಮನೋಭಾವದ ಮಂದಿ ಉದ್ದೇಶಪೂರ್ವಕವಾಗಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಸಂಗಗಳು ಪದೇ ಪದೇ ವರದಿಯಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಾಗಲೀ, ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸೂಕ್ತ ಕ್ರಮ ಕೈಗೊಂಡು ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗುತ್ತಲೇ ಬಂದಿದ್ದಾರೆ. ಯುವತಿಯರ, ಮಹಿಳೆಯರ ಬಗ್ಗೆ ಮಾತೆತ್ತಿದ್ದರೆ, ಮಾತೆ, ತಾಯಿ ಎಂದೆಲ್ಲಾ ಭಾಷಣ ಬಿಗಿಯುವವರೂ ನಿಜಾರ್ಥದಲ್ಲಿ ಮಹಿಳೆರ, ಹೆಣ್ಣು ಮಕ್ಕಳ ವಿರುದ್ದ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಕ್ರಮ ಕೈಗೊಳ್ಳುವಲ್ಲಿ ಪದೇ ಪದೇ ಸೋಲುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ಹೋದ ಯುವತಿಯೋರ್ವಳು ನಗರದ ಖಾಸಗಿ ಬಸ್ಸಿನಲ್ಲಿ ಸ್ವತಃ ತನಗಾದ ಕಿರುಕುಳ, ಅನ್ಯಾಯದ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಿಸದೆ ನೇರವಾಗಿ ಡಿಜಿಟಲ್ ಸ್ಟ್ರೈಕ್ ಮೂಲಕ ಎಲ್ಲರ ಗಮನ ಸೆಳದು ಅನ್ಯಾಯದ ವಿರುದ್ದ ಸೆಟೆದು ನಿಂತಿದ್ದಾಳೆ. ಯುವತಿ ತಾನು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕನಿಂದ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದ ರೂಪವದ ಇನ್ಸ್ಟಾಗ್ರಾಂನಲ್ಲಿ ಸುದೀರ್ಘ ಲೇಖನವನ್ನು ಹಂಚಿಕೊಳ್ಳುವ ಮೂಲಕ ಸಂಬಂಧಪಟ್ಟವರ ಗಮನ ಸೆಳೆಯಲು ಪ್ರಯತ್ನಿಸಿದ್ದು, ಇದು ಮಿಂಚಿನ ಸಂಚಾರ ಪಡೆದುಕೊಂಡಿದೆ. ಹೃಷ್ವ ಅವಧಿಯಲ್ಲಿ ಯುವತಿಯ ಈ ಪೋಸ್ಟ್ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದೆ. ನಗರದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಿಂದ ಮಹೇಶ್ ಎಂಬ ಹೆಸರಿನ ಖಾಸಗಿ ಬಸ್ಸಿನಲ್ಲಿ ಜನವರಿ 14 ರಂದು ಪಂಪ್‍ವೆಲ್‍ಗೆ ಸಂಚರಿಸುತ್ತಿದ್ದ ವೇಳೆ ಬಸ್ಸಿನೊಳಗೆ ಅನುಭವಿಸಿದ ಘಟನೆಯನ್ನು ಯುವತಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಸ್ತಾರವಾಗಿ ಹಂಚಿಕೊಂಡಿದ್ದಾಳೆ. ಜ. 14 ರಂದು ಮಧ್ಯಾಹ್ನ 3.45ರ ಸುಮಾರಿಗೆ ನಾನು ಬಸ್‍ನಲ್ಲಿ ಪಂಪ್‍ವೆಲ್‍ಗೆ ತೆರಳುತ್ತಿದ್ದೆ. ಈ ವೇಳೆ ವ್ಯಕ್ತಿಯೋರ್ವನು ಆಸ್ಪತ್ರೆ ನಿಲ್ದಾಣದಿಂದ ಬಸ್‍ಗೆ ಹತ್ತಿದ್ದು, ನನ್ನ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದಾನೆ. ಈ ವೇಳೆ ಆತ ಫೆÇೀನ್‍ನಲ್ಲಿ ಮಾತನಾಡುವಂತೆ ನಟಿಸುತ್ತಾ ಇನ್ನೊಂದು ಕೈಯಲ್ಲಿ ನನ್ನನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದಾನೆ. ಇದರಿಂದ ನಾನು ಸರಿದು ಕುಳಿತೆ. ಆದರೆ ಆತ ತನ್ನ ಚಾಳಿ ಬಿಡಲಿಲ್ಲ. ಅಸಹನೆಗೊಂಡ ನಾನು ಆತನಿಗೆ ಎಚ್ಚರಿಕೆಯನ್ನು ನೀಡಿದೆ. ಈ ಸಂದರ್ಭ ಆತ ಅವನು ನನ್ನಲ್ಲಿ ಕ್ಷಮೆ ಕೇಳಿ ಹಿಂಬದಿ ಆಸನದಲ್ಲಿ ಹೋಗಿ ಕುಳಿತುಕೊಂಡ. ಬಳಿಕ ಮೂರು ಸ್ಟಾಪ್ ಕಳೆದು ಆತ ಸದ್ರಿ ಬಸ್ಸಿನಿಂದ ಕೆಳಗಿಳಿದ. ಆದರೆ ಆತ ಮತ್ತೆ ಇದೇ ಮಹೇಶ್ ಬಸ್ಸಿಗೆ ಹತ್ತಿ ಪುನಃ ನನ್ನ ಬಳಿ ಬಂದು ಕುಳಿತುಕೊಂಡ. ಅಲ್ಲದೇ ಪುನಃ ನನ್ನನ್ನು ಸ್ಪರ್ಶಿಸಲು ಆರಂಭಿಸಿದ. ಈ ವೇಳೆ ನಾನು ಆತನಲ್ಲಿ ಪುರುಷರ ಸೀಟ್‍ನಲ್ಲಿ ಕುಳಿತುಕೊಳ್ಳುವಂತೆ ಹೇಳಿದೆ. ಆದರೆ, ಆತ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಪುನಃ ಸ್ಪರ್ಶಿಸಲು ಆರಂಭಿಸಿದ. ದುರಾದೃಷ್ಟವೆಂದರೆ ಈ ಎಲ್ಲಾ ಕಿರುಕುಳ ಈತ ನೀಡುತ್ತಿದ್ದರೂ ಕೂಡ ಉಳಿದ ಪ್ರಯಾಣಿಕರು, ಬಸ್ಸು ನಿರ್ವಾಹಕ ಹಾಗೂ ಚಾಲಕ ನನ್ನನ್ನು ನೋಡುತ್ತಿದ್ದಾರೆಯೇ ಹೊರತು ಯಾವುದೇ ರೀತಿಯಲ್ಲಿ ಆತನಿಗೆ ಜೋರು ಮಾಡುವುದಾಗಲೀ, ಎಚ್ಚರಿಕೆ ನೀಡುವುದಾಗಲೀ ಮಾಡಿಲ್ಲ. ಆಗ ನಾನು ನಿಮ್ಮ ಫೆÇೀಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇನೆ. ಇದರಿಂದ ಈ ರೀತಿಯಾದ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಎಂದು ಎಚ್ಚರಿಕೆ ನೀಡಿದೆ. ಈ ವೇಳೆ ಆತ ಮಾಸ್ಕ್ ತೆಗೆದು ಫೆÇೀಟೋಗೆ ಪೆÇೀಸ್ ನೀಡಿ ಧನ್ಯವಾದಗಳು ಎಂದು ಹೇಳಿದ. ಜಾಗೃತಿ ಮೂಡಿಸುವ ಸಲುವಾಗಿ ನಾನು ಈ ಪೆÇೀಸ್ಟ್ ಮಾಡಿದ್ದೇನೆ. ಸಾಮಾನ್ಯವಾಗಿ ಕೆಲಸ, ಕಾಲೇಜಿಗೆ ಹೋಗುವ ಸಂದರ್ಭ ಸಾರ್ವಜನಿಕ ಸಾರಿಗೆ ಬಳಸುವ ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ಈ ರೀತಿಯ ಅನುಭವ ಸಾಕಷ್ಟು ಆಗಿರಬಹುದು. ಆದರೆ ದುರಾದೃಷ್ಟವಶಾತ್, ಶೇ.99ರಷ್ಟು ಮಹಿಳೆಯರಿಗೆ ಈ ರೀತಿಯ ಅನುಭವಿದ್ದರೂ ತಮ್ಮ ಘನತೆ ಹಾಗೂ ಭವಿಷ್ಯಕ್ಕೆ ಹೆದರಿ ಈ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾವುದೇ ಕಾನೂನು, ಪೆÇಲೀಸರು, ಯಾರೇ ಆದರೂ ಕೂಡ ಬಂದು ನಿಮಗೆ ಸಹಾಯ ಮಾಡುವುದಿಲ್ಲ. ಬದಲಾಗಿ ರಿಯಾಲಿಟಿ ಶೋ ನೋಡುವ ರೀತಿ ನಿಂತು ನೋಡುತ್ತಿರುತ್ತಾರೆ. ಈ ಪೋಸ್ಟ್ ಓದುವ ಮಹಿಳೆಯರು ಅಥವಾ ಪುರುಷರು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಸಾಧ್ಯವಾದಷ್ಟು ಈ ಪೆÇೀಸ್ಟ್ ಅನ್ನು ಶೇರ್ ಮಾಡಿ ಎಂದು ಯುವತಿ ತನ್ನ ಇನ್ಸ್ಟಾಗ್ರಾಂ ಪೋಸ್ಟಿನಲ್ಲಿ ತಿಳಿಸಿದ್ದಾರೆ. ಸದ್ರಿ ಯುವತಿಯ ಈ ಪೋಸ್ಟ್ ಸುಮಾರು ಒಂದು ಲಕ್ಷ ಹತ್ತು ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿಕೊಂಡಿದ್ದು, ಸುಮಾರು ಮೂರೂವರೆ ಸಾವಿರ ಮಂದಿ ಪ್ರತಿಕ್ರಯಿಸಿಕೊಂಡಿದ್ದಾರೆ. ಸದ್ರಿ ಪೋಸ್ಟಿಗೆ ಸಂಬಂಧಿಸಿ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಸದ್ರಿ ಪೋಸ್ಟಿನಲ್ಲಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಖಾಸಗಿ ಬಸ್ಸುಗಳಲ್ಲಿ ಮಿತಿ ಮೀರುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣ : ಡಿಜಿಟಲ್ ಸ್ಟ್ರೈಕ್ ಮೊರೆ ಹೋದ ನಗರದ ಯುವತಿ Rating: 5 Reviewed By: karavali Times
Scroll to Top