ಗೋಳಿನೆಲ ಅಂಗನವಾಡಿಯಲ್ಲಿ ಆರೋಗ್ಯ ದಿನಾಚರಣೆ - Karavali Times ಗೋಳಿನೆಲ ಅಂಗನವಾಡಿಯಲ್ಲಿ ಆರೋಗ್ಯ ದಿನಾಚರಣೆ - Karavali Times

728x90

6 January 2021

ಗೋಳಿನೆಲ ಅಂಗನವಾಡಿಯಲ್ಲಿ ಆರೋಗ್ಯ ದಿನಾಚರಣೆ

 


ಬಂಟ್ವಾಳ, ಜ 06, 2021 (ಕರಾವಳಿ ಟೈಮ್ಸ್) : ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮದಡಿ, ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ಬಂಟ್ವಾಳ, ಹದಿಹರೆಯರ ಅರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಕಿಶೋರ-ಕಿಶೋರಿಯರಿಗಾಗಿ ಗೋಳಿನೆಲ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಪ್ರಾಥಮಿಕ ನಗರ ಅರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಅಶ್ವಿನಿ ಹದಿಹರೆಯದಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಬದಲಾವಣೆಗಳನ್ನು ಹತ್ತಿಕ್ಕಿ ವಿದ್ಯಾಭಾಸ್ಯದ ಕಡೆಗೆ ಗಮನಹರಿಸಬೇಕು ಎಂದರು. 

ಹಿರಿಯ ಅರೋಗ್ಯ ಸಹಾಯಕಿ ಚಂದ್ರಪ್ರಭಾ, ಅಂಗನವಾಡಿ ಮೇಲ್ವಿಚಾರಕಿ ಲೀಲಾವತಿ, ಗೋಳಿನೆಲ ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶುಭಶ್ರಿ, ಸಮತಿ ಗೋಲಿನೆಲ ಮುಖ್ಯ ಅತಿಥಿಗಳಾಗಿ ಭಾಗವಿಸಿದ್ದರು.

ಆರ್‍ಕೆಎಸ್‍ಕೆ ಕೌನ್ಸಿಲರ್ ಅಕ್ಷತಾ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಹದಿಹರೆಯದಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ಸಮಸ್ಯೆಗಳೆಂದರೆ ಪೌಷಿಕಾಂಶದ ಕೊರತೆ, ಮಾನಸಿಕ ಆರೋಗ್ಯದ ಸಮಸ್ಯೆ, ಲೈಂಗಿಕ ಮತ್ತು ಸಂತಾನೋತ್ಪಾತಿ ಸಮಸ್ಯೆಗಳು, ಲೈಂಗಿಕ ದೌರ್ಜನ್ಯಗಳು, ಸಾಂಕ್ರಾಮಿಕ ರೋಗಗಳ ಹಾಗೂ ದುಶ್ಚಟ ವ್ಯಸನಗಳ ಬಗ್ಗೆ ಮಾಹಿತಿ ನೀಡಿದರು. 

ಕಾಯಕ್ರಮದಲ್ಲಿ ಕಿರಿಯ ಅರೋಗ್ಯ ಸಹಾಯಕಿಯರಾದ ಅಕ್ಷತಾ, ಸೌಮ್ಯ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಲಲಿತಾ ಸ್ವಾಗತಿಸಿ, ಸೌಮ್ಯ ವಂದಿಸಿದರು. ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.








  • Blogger Comments
  • Facebook Comments

0 comments:

Post a Comment

Item Reviewed: ಗೋಳಿನೆಲ ಅಂಗನವಾಡಿಯಲ್ಲಿ ಆರೋಗ್ಯ ದಿನಾಚರಣೆ Rating: 5 Reviewed By: karavali Times
Scroll to Top