ನವದೆಹಲಿ, ಜ, 01, 2021 (ಕರಾವಳಿ ಟೈಮ್ಸ್) : ದೇಶಾದ್ಯಂತ ಇಂದಿನಿಂದ ಎಲ್ಲಾ ಮಾದರಿಯ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. 2017ಕ್ಕೂ ಮೊದಲೇ ಖರೀದಿಸಿದ ಎಲ್ಲ ವಾಹನಗಳಿಗೂ ಇಂದಿನಿಂದ ಫಾಸ್ಟ್ ಟಾಗ್ ಕಡ್ಡಾಯಗೊಳಿಸಲಾಗಿದೆ. ಆದರೆ ಇನ್ನೂ ಸಾಕಷ್ಟು ಮಂದಿಗೆ ಫಾಸ್ಟ್ಯಾಗ್ ಬಗ್ಗೆ ಅರಿವಿಲ್ಲದ ಕಾರಣ ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಫೆಬ್ರವರಿ 15ರವರೆಗೆ ಟೋಲ್‍ಗಳಲ್ಲಿ ಹೈಬ್ರಿಡ್ ಲೇನ್ (ಪ್ರತ್ಯೇಕ ಲೇನ್) ವ್ಯವಸ್ಥೆ ಮಾಡಿದ್ದು ಹಣ ಪಾವತಿಸಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಫೆಬ್ರವರಿ 15ರೊಳಗೆ ಫಾಸ್ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಹೊಸ ವ್ಯವಸ್ಥೆಯ ಆರಂಭಿಕ ಅಡಚಣೆಗಳನ್ನು ಬಗೆಹರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಖಾಸಗಿಯಾಗಿರಲಿ ಅಥವಾ ವಾಣಿಜ್ಯ ಬಳಕೆಗೆಯಾಗಿರಲಿ ಎಲ್ಲ ನಾಲ್ಕು ಚಕ್ರದ ವಾಹನಗಳಿಗೂ ಫಾಸ್ಟ್‍ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ.
ಆರಂಭದಲ್ಲಿ ಡಿಸೆಂಬರ್ 15ರೊಳಗೆ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಬೇಕೆಂದು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿತ್ತು. ನಂತರ ಅದನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿತ್ತು. ಕೊನೆಗೆ ಅಂತಿಮವಾಗಿ ಜನವರಿ 1ಕ್ಕೆ ಮುಂದೂಡಲಾಗಿತ್ತು ಇದೀಗ ಆ ಗಡುವನ್ನು ಮತ್ತೆ ಫೆಬ್ರವರಿ 15ರವರೆಗೂ ವಿಸ್ತರಿಸಲಾಗಿದೆ.
0 comments:
Post a Comment