ರೈತರ ತಾಳ್ಮೆ ಪರೀಕ್ಷಿಸಿದ ಪೊಲೀಸರು : ಕ್ಯಾರೇ ಎನ್ನದೆ ಮುನ್ನುಗ್ಗಿದ ರೈತ ಸಮೂಹ, ರಣರಂಗವಾದ ದೆಹಲಿಯಲ್ಲಿ ಘರ್ಷಣೆಗೆ ಓರ್ವ ರೈತ ಬಲಿ - Karavali Times ರೈತರ ತಾಳ್ಮೆ ಪರೀಕ್ಷಿಸಿದ ಪೊಲೀಸರು : ಕ್ಯಾರೇ ಎನ್ನದೆ ಮುನ್ನುಗ್ಗಿದ ರೈತ ಸಮೂಹ, ರಣರಂಗವಾದ ದೆಹಲಿಯಲ್ಲಿ ಘರ್ಷಣೆಗೆ ಓರ್ವ ರೈತ ಬಲಿ - Karavali Times

728x90

26 January 2021

ರೈತರ ತಾಳ್ಮೆ ಪರೀಕ್ಷಿಸಿದ ಪೊಲೀಸರು : ಕ್ಯಾರೇ ಎನ್ನದೆ ಮುನ್ನುಗ್ಗಿದ ರೈತ ಸಮೂಹ, ರಣರಂಗವಾದ ದೆಹಲಿಯಲ್ಲಿ ಘರ್ಷಣೆಗೆ ಓರ್ವ ರೈತ ಬಲಿ

ನವದೆಹಲಿ, ಜ. 26, 2021 (ಕರಾವಳಿ ಟೈಮ್ಸ್) : ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳಿಂದ ದೆಹಲಿಯ ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ನಡೆಸುವ ಮಂದಿಗಳು ಯಾವುದೇ ಸ್ಪಂದನೆ ನೀಡದ ಹಿನ್ನಲೆಯಲ್ಲಿ ಗಣರಾಜ್ಯೋತ್ಸವ ದಿನವಾದ ಮಂಗಳವಾರ ರೈತ ಸಮುದಾಯದ ತಾಳ್ಮೆಯ ಕಟ್ಟೆ ಅಕ್ಷರಶಃ ಒಡೆದು ಹೋಗಿದೆ. ಪರಿಣಾಮ ರೈತ ಸಮೂಹ ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕುವ ಮೂಲಕ ಸರಕಾರದ ವಿರುದ್ದ ತಮ್ಮ ಅತ್ಯಾಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಭುಗಿಲೆದ್ದು ರೈತರು ಪೆÇಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ರೈತರ ಆಕ್ರೋಶಕ್ಕೆ ಅಡ್ಡಿಪಡಿಸಿದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರಲ್ಲದೆ ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಪ್ರತಿಭಟನಾನಿರತ ಓರ್ವ ರೈತ ಮೃತಪಟ್ಟಿದ್ದಾರೆ. ದೆಹಲಿಯ ಮುಕಾರ್ಬಾ ಚೌಕ್‍ನಲ್ಲಿ ಬ್ಯಾರಿಕೇಡ್‍ಗಳನ್ನು ಮುರಿಯಲು ಯತ್ನಿಸಿದ ರೈತರ ಮೇಲೆ ಪೆÇಲೀಸರು ಲಾಠಿ ಪ್ರಹಾರ, ಜೊತೆಗೆ ಅಶ್ರುವಾಯು ಪ್ರಯೋಗಿಸಿದ್ದಾರೆ. ಪೊಲೀಸರ ಬಲಪ್ರಯೋಗಕ್ಕೆ ಕ್ಯಾರೇ ಎನ್ನದ ರೈತರು ದೆಹಲಿಯ ಹೃದಯ ಭಾಗ ತಲುಪಿದ್ದು, ಕೆಂಪು ಕೋಟೆಗೆ ನುಗ್ಗಿ ರೈತ ಧ್ವಜ ಹಾರಿಸಿದ್ದಾರೆ. ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಐಟಿಒ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ದೆಹಲಿಯ ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಯಲ್ಲಿ ಇಂದು ಬೆಳಗ್ಗೆ ಹಿಂಸಾಚಾರ ಭುಗಿಲೆದ್ದಿದ್ದು, ಬ್ಯಾರಿಕೇಡ್‍ಗಳನ್ನು ಮುರಿದು ಕಾಶ್ಮೀರಿ ದ್ವಾರವನ್ನು ತಲುಪಿದ ನೂರಾರು ರೈತರ ಮೇಲೆ ಪೆÇಲೀಸರು ಲಾಠಿ ಚಾರ್ಚ್ ನಡೆಸಿ ಅಶ್ರುವಾಯು ಪ್ರಯೋಗಿಸಿದ್ದಾರೆ. ರೈತರು ಸಿಮೆಂಟೆಡ್ ಬ್ಯಾರಿಕೇಡ್‍ಗಳನ್ನು ಮುರಿದಿದ್ದಾರೆ. ಮೆರವಣಿಗೆಗಾಗಿ ಮಧ್ಯ ದೆಹಲಿಯ ಐತಿಹಾಸಿಕ ರಾಜ್‍ಪಾತ್‍ಗೆ ತಲುಪುವ ಪ್ರಯತ್ನದಲ್ಲಿ ನೂರಾರು ರೈತರು ಕಾಲ್ನಡಿಗೆಯಿಂದ ಮತ್ತು ಟ್ರಾಕ್ಟರುಗಳ ಮೂಲಕ ದೆಹಲಿ ಅಕ್ಷರ್ಧಮ್ ದೇವಸ್ಥಾನವನ್ನು ತಲುಪಿದ್ದಾರೆ. ಆದರೆ, ಅವರನ್ನು ಪೆÇಲೀಸರು ತಡೆದಿದ್ದಾರೆ. ವರದಿಯ ಪ್ರಕಾರ, ದೇವಾಲಯದ ರಸ್ತೆಯಲ್ಲಿ ರೈತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ.
  • Blogger Comments
  • Facebook Comments

0 comments:

Post a Comment

Item Reviewed: ರೈತರ ತಾಳ್ಮೆ ಪರೀಕ್ಷಿಸಿದ ಪೊಲೀಸರು : ಕ್ಯಾರೇ ಎನ್ನದೆ ಮುನ್ನುಗ್ಗಿದ ರೈತ ಸಮೂಹ, ರಣರಂಗವಾದ ದೆಹಲಿಯಲ್ಲಿ ಘರ್ಷಣೆಗೆ ಓರ್ವ ರೈತ ಬಲಿ Rating: 5 Reviewed By: karavali Times
Scroll to Top