ಬೆಂಗಳೂರು, ಜ. 17, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಜಾನುವಾರು ಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ರಾಜ್ಯದ ಜನತೆಯ ತೀವ್ರ ವಿರೋಧದ ನಡುವೆ ಜಾರಿಗೆ ತರಲು ಮುಂದಾಗುತ್ತಿರುವ ದೌರ್ಜನ್ಯದ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ ಖಂಡಿಸಿದೆ ಜೊತೆಗೆ ತಕ್ಷಣ ಕಾಯ್ದೆಯನ್ನು ವಾಪಾಸು ಪಡೆಯುವಂತೆ ಒತ್ತಾಯಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ರಾಜ್ಯ ಸಮಿತಿ ಕಾರ್ಯದರ್ಶಿ ಯು ಬಸವರಾಜ ಅವರು ಇದೊಂದು ಕರಾಳ ಸುಗ್ರೀವಾಜ್ಞೆಯಾಗಿದ್ದು ಜಾನುವಾರು ಉಪ ಕಸುಬು ಮತ್ತು ಜಾನುವಾರು ಆಧಾರಿತ ಹೈನೋದ್ಯಮ, ಮಾಂಸೋದ್ಯಮ, ಚರ್ಮೋದ್ಯಮ ಮತ್ತು ಔಷದ ಉದ್ಯಮಗಳನ್ನು ನಾಶಗೊಳಿಸಿ ಮತ್ತು ಕಾಪೆರ್Çೀರೇಟ್ ಕಂಪೆನಿಗಳ ತೆಕ್ಕೆಗೆ ಅವುಗಳನ್ನು ಅತ್ಯಂತ ವೇಗವಾಗಿ ದೂಡುವ ವಿನಾಶಕಾರಿ ಹುನ್ನಾರವಿದಾಗಿದೆ. ಇದರಿಂದ ಮಿಲಿಯಗಟ್ಟಲೆ ಜನರ ಉದ್ಯೋಗಗಳು ನಾಶವಾಗಲಿವೆ ಮತ್ತು ಇದು ನಿರುದ್ಯೋಗದ ಪಡೆಯನ್ನು ವ್ಯಾಪಕವಾಗಿ ಹೆಚ್ಚಿಸಲಿದೆ ಎಂದಿದ್ದಾರೆ.
ಇದು, ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯಗಳ, ಅಲ್ಪಸಂಖ್ಯಾತ ಬಹುತೇಕರ ಆಹಾರದ ಹಾಗೂ ಉದ್ಯೋಗದ ಹಕ್ಕಿನ ಮೇಲಿನ ವ್ಯವಸ್ಥಿತ ದಾಳಿಯಾಗಿದೆ. ಇದರಿಂದ ದಲಿತ ಸಂಕುಲ ಪರಂಪರೆಯಿಂದ ತನ್ನ ಬದುಕಿಗಾಗಿ ಬಳಸುತ್ತಾ ಬಂದ ಏಕೈಕ ಪೌಷ್ಠಿಕ ಆಹಾರದ ಅಭಾವವನ್ನು ತೀವ್ರವಾಗಿ ಎದುರಿಸಿ, ಸಂಕುಲ ಸಂರಕ್ಷಣೆಯ ಸಮಸ್ಯೆಯನ್ನು ಗಂಭೀರವಾಗಿ ಎದುರಿಸಲಿದೆ ಎಂದಿರುವ ಅವರು ಈ ಕಾಯ್ದೆ ಜಾರಿ ರಾಜ್ಯದಲ್ಲಿ ಕೋಮು ವಿಭಜನೆಗೆ ಮತ್ತು ದ್ವೇಷಕ್ಕೆ ಕುಮ್ಮಕ್ಕು ನೀಡಲಿದೆ. ಅಲ್ಪ ಸಂಖ್ಯಾತರ ಮೇಲಿನ ದಾಳಿಗೂ ಇದು ಸಹಕಾರಿಯಾಗಲಿದೆ ಎಂದಿದ್ದಾರೆ.
ಒಟ್ಟಾರೆ ಈ ಕಾಯ್ದೆ ಜಾರಿ ಜಾತ್ಯಾತೀತ ಪ್ರಜಾಸತ್ತೆಯ ಸಂವಿಧಾನದ ವಿರೋಧಿಯಾಗಿದೆ. ಇಂತಹ ಯಾವುದೇ ಸಂಕಷ್ಟಗಳ ನಿವಾರಣೆಗೆ ಅಗತ್ಯವಾದ ಯವುದೇ ಪರಿಹಾರದ ಬಗೆಗೆ ಸದ್ರಿ ಸುಗ್ರೀವಾಜ್ಞೆ ಮತ್ತು ಸರಕಾರ ಕ್ರಮವಹಿಸಿಲ್ಲ ಎಂದು ಅಭಿಪ್ರಾಯಪಟ್ಟಿರುವ ಬಸವರಾಜ ರಾಜ್ಯವು ಈಗಾಗಲೇ ತೀವ್ರ ಅರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಈ ಸುಗ್ರೀವಾಜ್ಞೆಯು ಮತ್ತಷ್ಟು ಸಂಕಷ್ಟವನ್ನು ಹೇರಲಿದೆ. ಈ ನಿಟ್ಟಿನಲ್ಲಿ ಕಾಯ್ದೆಯನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
17 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment