ಜ. 15 ರಂದು ರೈತರನ್ನು ಬೆಂಬಲಿಸಿ ಕಾಂಗ್ರೆಸ್ ನಿಂದ ದೇಶಾದ್ಯಂತ ರಾಜಭವನಗಳಿಗೆ ಮುತ್ತಿಗೆ - Karavali Times ಜ. 15 ರಂದು ರೈತರನ್ನು ಬೆಂಬಲಿಸಿ ಕಾಂಗ್ರೆಸ್ ನಿಂದ ದೇಶಾದ್ಯಂತ ರಾಜಭವನಗಳಿಗೆ ಮುತ್ತಿಗೆ - Karavali Times

728x90

9 January 2021

ಜ. 15 ರಂದು ರೈತರನ್ನು ಬೆಂಬಲಿಸಿ ಕಾಂಗ್ರೆಸ್ ನಿಂದ ದೇಶಾದ್ಯಂತ ರಾಜಭವನಗಳಿಗೆ ಮುತ್ತಿಗೆ

ನವದೆಹಲಿ ಜ. 09, 2021 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 42 ದಿನಗಳಿಂದ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಜನವರಿ 15 ರಂದು ದೇಶಾದ್ಯಂತ ರಾಜ ಭವನಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಪ್ರಕಟಿಸಿದೆ. "ಕೇಂದ್ರ ಸರಕಾರ ಜನರ ಬಗ್ಗೆ ತನ್ನ ಕರ್ತವ್ಯವನ್ನು ಏಕೆ ಪೂರೈಸುತ್ತಿಲ್ಲ? ಸರಕಾರವನ್ನು ಕೆಲವೇ ಕೆಲವು ಬಂಡವಾಳಶಾಹಿಗಳಿಗೆ ಮಾರಲಾಗುತ್ತಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜನವರಿ 15 ರಂದು 'ಕಿಸಾನ್ ಅಧಿಕಾರ ದಿವಾಸ್' ಆಚರಿಸಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಜನವರಿ 15 ರಂದು ನಾವು ದೇಶಾದ್ಯಂತ ಸರಣಿ ಪ್ರತಿಭಟನಾ ರ್ಯಾಲಿಗಳನ್ನು ಆಯೋಜಿಸುತ್ತೇವೆ ಮತ್ತು ಪ್ರತಿಭಟನಾ ಮೆರವಣಿಗೆ ಮೂಲಕ ರಾಜಭವನಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದವರು ತಿಳಿಸಿದ್ದಾರೆ. ಕೇಂದ್ರ ಸರಕಾರ "ಕಪ್ಪು ಕಾನೂನುಗಳನ್ನು" ರದ್ದುಗೊಳಿಸುವ ಬದಲು ರೈತರೊಂದಿಗೆ ಸಭೆ ನಡೆಸುವ ನಾಟಕವಾಡುತ್ತಿದೆ ಎಂದು ಸುರ್ಜೆವಾಲಾ ಇದೇ ವೇಳೆ ಆರೋಪಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಜ. 15 ರಂದು ರೈತರನ್ನು ಬೆಂಬಲಿಸಿ ಕಾಂಗ್ರೆಸ್ ನಿಂದ ದೇಶಾದ್ಯಂತ ರಾಜಭವನಗಳಿಗೆ ಮುತ್ತಿಗೆ Rating: 5 Reviewed By: karavali Times
Scroll to Top