ಮಂಗಳೂರು, ಜ, 03, 2021 (ಕರಾವಳಿ ಟೈಮ್ಸ್) : ಮದುವೆ ಕಾರ್ಯಕ್ರಮ ನಿಮಿತ್ತ ಹೊರಟಿದ್ದ ಬಸ್ ರಸ್ತೆ ಬದಿಯಿದ್ದ ಮನೆ ಮೇಲೆ ಉರುಳಿಬಿದ್ದ ಪರಿಣಾಮ ಏಳು ಮಂದಿ ಮೃತಪಟ್ಟ ದಾರುಣ ಘಟನೆ ಕರ್ನಾಟಕ-ಕೇರಳ ಗಡಿಭಾಗದ ಕಲ್ಲಪಳ್ಳಿ ಬಳಿ ಭಾನುವಾರ ಸಂಭವಿಸಿದೆ.
ಮೃತರನ್ನು ರವಿಚಂದ್ರನ್ (40), ರಾಜೇಶ್ (45), ಸುಮತಿ (50), ಜಯಲಕ್ಷ್ಮಿ (39) ಮತ್ತು ಸಶೀಂದ್ರ ಪೂಜಾರ (43), ಆದರ್ಶ್ (12), ಶ್ರೇಯಸ್ (13) ಎಂದು ಹೆಸರಿಸಲಾಗಿದೆ. ಪುತ್ತೂರಿನಿಂದ ಕೇರಳದ ಪಾಣತ್ತೂರಿಗೆ 63 ಮಂದಿಯನ್ನು ಹೊತ್ತು ಬಸ್ ತೆರಳುತ್ತಿತ್ತು. ಈ ಸಂದರ್ಭ ಕಲ್ಲಪಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಮೀರಿ ಬಸ್ ಮನೆಯ ಮೇಲೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಭೀಕರ ಅಪಘಾತದಿಂದ ಈಗಾಗಲೇ 7 ಮಂದಿ ಮೃತಪಟ್ಟಿದ್ದು, ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸುಮಾರು ಹತ್ತು ಮಂದಿ ಗಂಭೀರಾವಸ್ಥೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕೇರಳದ ಕಾಂಞಂಗಾಡ್ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
0 comments:
Post a Comment