ಬಂಟ್ವಾಳ ಜ. 29, 2021 (ಕರಾವಳಿ ಟೈಮ್ಸ್) : ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಬೈಕೊಂದು ಸವಾರನಿಲ್ಲದೆ ಮಧ್ಯರಾತ್ರಿ ವೇಳೆಗೆ ಏಕಾಏಕಿ ಚಲಿಸಿ ಬಳಿಕ ರಸ್ತೆ ಮಧ್ಯದಲ್ಲೇ ಅಡ್ಡಬಿದ್ದ ಸೀಸಿ ಟೀವಿ ಫೂಟೇಜ್ ವೀಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
2020 ರ ಡಿಸೆಂಬರ್ 30ರಂದು ಮಧ್ಯರಾತ್ರಿ 3.52 ರ ವೇಳೆಗೆ ಈ ಘಟನೆ ನಡೆದಿದ್ದು ಸಿಸಿ ಟೀವಿ ಫೂಟೇಜ್ ನಲ್ಲಿ ಕಂಡು ಬರುತ್ತಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಇದು ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನಡೆದ ಘಟನೆ ಎಂಬ ಒಕ್ಕಣೆ ಸಾಮಾಜಿಕ ತಾಣದಲ್ಲಿ ಬರೆಯಲಾಗಿದ್ದರೂ ವೀಡಿಯೋದಲ್ಲಿ ಕಂಡು ಬರುವ ಕಿರುದಾದ ಗಲ್ಲಿ ಪಾಣೆಮಂಗಳೂರು ಪರಿಸರದಲ್ಲಿ ಎಲ್ಲೂ ಇಲ್ಲ ಎಂದು ಸ್ವತಃ ಪಾಣೆಮಂಗಳೂರು ನಿವಾಸಿಗಳೆ ಹೇಳುತ್ತಿದ್ದಾರೆ.
ಘಟನೆ ನಡೆದ ಊರಿನ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಸವಾರನಿಲ್ಲದೆ ಬೈಕ್ ಚಲಿಸಿದ ಈ ಘಟನೆಯ ದೃಶ್ಯ ಮಾತ್ರ ಸಾರ್ವಜನಿಕರಲ್ಲಿ ಭಾರೀ ಸಂಚಲನ ಮೂಡಿಸಿದೆ. ಆಶ್ಚರ್ಯಕರ ಘಟನೆಯ ಈ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು ವಿವಿಧ ರೀತಿಯ ಚರ್ಚೆಗಳನ್ನೂ ನಾಗರಿಕ ಸಮಾಜದಲ್ಲಿ ಹುಟ್ಟು ಹಾಕಿದೆ.
28 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment