ಬೆಳ್ತಂಗಡಿ, ಜ. 19, 2021 (ಕರಾವಳಿ ಟೈಮ್ಸ್) : ತಾಲೂಕಿನ ಗರ್ಡಾಡಿ ಗ್ರಾಮದ ನಡು ಮುಂಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (56) ಎಂಬವರನ್ನು ಹಲ್ಲೆ ನಡೆಸಿ ಹತ್ಯೆ ನಡೆಸಿದ ಆರೋಪಿ ಪುತ್ರ ಹರೀಶ ಪೂಜಾರಿ (27) ಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಪುತ್ರನಿಗೆ ತಂದೆಯೊಂದಿಗೆ ತನ್ನ ಮದುವೆಗೆ ಸಂಬಂಧಿಸಿದಂತೆ ಮನಸ್ತಾಪವಿದ್ದು, ಇದೇ ವಿಚಾರದಲ್ಲಿ ಪ್ರತಿ ದಿನ ಆರೋಪಿ ಹರೀಶ ಪೂಜಾರಿ ತನ್ನ ತಂದೆಯೊಂದಿಗೆ ಗಲಾಟೆ ನಡೆಸುತ್ತಿದ್ದನು. ಸೋಮವಾರ (ಜ. 18) ಮದ್ಯಾಹ್ನದ ವೇಳೆಗೆ ಆರೋಪಿ ಪುತ್ರ ತಂದೆಯೊಂದಿಗೆ ಗಲಾಟೆ ನಡೆಸಿದ್ದು, ಬಳಿಕ ಸಂಜೆ ಸುಮಾರು 6.30 ರವೇಳೆಗೆ ಶ್ರೀಧರ ಪೂಜಾರಿ ಗರ್ಡಾಡಿ ಗ್ರಾಮದ ನಡು ಮುಂಡ್ಯೊಟ್ಟು ಎಂಬಲ್ಲಿ ತನ್ನ ಸಹೋದರನ ಮನೆಯಲ್ಲಿದ್ದಾಗ ಅಲ್ಲಿಗೆ ಆಗಮಿಸಿದ ಆರೋಪಿ ಪುತ್ರ ತಂದೆಯೊಂದಿಗೆ ಮತ್ತೆ ಗಲಾಟೆ ನಡೆಸಿ ಮರದ ಪಕ್ಕಾಸಿನ ತುಂಡಿನಿಂದ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಶ್ರೀಧರ ಪೂಜಾರಿ ಅವರನ್ನು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಪುತ್ರನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
18 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment