ಬೆಳ್ತಂಗಡಿ, ಜ. 08, 2021 (ಕರಾವಳಿ ಟೈಮ್ಸ್) : ಪತಿ ಹಾಗೂ ಅತ್ತೆ-ಮಾವಂದಿರುವ ಸೇರಿಕೊಂಡು ಮಹಿಳೆಯನ್ನು ಮಾರಕಾಯುಧದಿಂದ ಹಲ್ಲೆ ನಡೆಸಿ ಕೊಲೆ ನಡೆಸಿದ್ದಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳ ಪೆÇಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಗಂಡಿಬಾಗಿಲು ಕೊಚ್ಚಿತ್ತರ ನಿವಾಸಿ ಆರೋಪಿ ಜೋನ್ಸನ್ ಎಂಬಾತ ಸೌಮ್ಯ ಪ್ರಾನ್ಸಿಸ್ ಎಂಬಾಕೆಯೊಂದಿಗೆ 13 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಯಾದ ಕೆಲ ಸಮಯಗಳ ಬಳಿಕ ಆರೋಪಿಗಳಾದ ಅಕೆಯ ಗಂಡ ಜೋನ್ಸನ್, ಅತ್ತೆ ಶ್ರೀಮತಿ ಮೇರಿ ಮತ್ತು ಮಾವ ಮ್ಯಾಥ್ಯು ರವರು ವಿನಾ ಕಾರಣ ಕ್ಷುಲ್ಲಕ ವಿಚಾರಗಳಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿರುತ್ತಾರೆ ಎಂದು ಆರೋಪಿಸಲಾಗಿದೆ. ಜ 7 ರಂದು ರಾತ್ರಿ 7.30-8.30 ರ ಮಧ್ಯದ ಅವಧಿಯಲ್ಲಿ ಆರೋಪಿಗಳು ಯಾವುದೋ ಮಾರಕಾಯುಧದಿಂದ ಹಲ್ಲೆ ನಡೆಸಿ ಸೌಮ್ಯ ಪ್ರಾನ್ಸಿಸ್ ರವರರನ್ನು ಕೊಲೆ ಮಾಡಿರುವುದಾಗಿ ಮೃತ ಸೌಮ್ಯ ಪ್ರಾನ್ಸಿಸ್ ಅವರ ಸಹೋದರ ಸನೋಜ್ ಪ್ರಾನ್ಸಿಸ್ ನೀಡಿದ ದೂರಿನಂತೆ ಜ 8 ರಂದು ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಕಲಂ 498 (ಎ), 302 ಜೊತೆಗೆ 34 ಐಪಿಸಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment