ದುಬೈಯಲ್ಲಿ ಕನ್ನಡಿಗರಿಂದ ಬೇ ಬೈಟ್ಸ್ ರೆಸ್ಟೋರೆಂಟ್ ಶುಭಾರಂಭ - Karavali Times ದುಬೈಯಲ್ಲಿ ಕನ್ನಡಿಗರಿಂದ ಬೇ ಬೈಟ್ಸ್ ರೆಸ್ಟೋರೆಂಟ್ ಶುಭಾರಂಭ - Karavali Times

728x90

14 January 2021

ದುಬೈಯಲ್ಲಿ ಕನ್ನಡಿಗರಿಂದ ಬೇ ಬೈಟ್ಸ್ ರೆಸ್ಟೋರೆಂಟ್ ಶುಭಾರಂಭ

ದುಬೈ, ಜ. 14, 2021 (ಕರಾವಳಿ ಟೈಮ್ಸ್) : ಪುತ್ತೂರು ಹಾಗೂ ಮಂಜೇಶ್ವರ ಮೂಲದ ಕನ್ನಡಿಗರಿಂದ ಸ್ಥಾಪಿತಗೊಂಡ ಬೇ ಬೈಟ್ಸ್ ರೆಸ್ಟೋರೆಂಟ್ ಆಂಡ್ ಕೆಫೆ ನೂತನ ಹೋಟೆಲ್ ದುಬೈ ಶೈಖ್ ಝಾಯೆದ್ ರಸ್ತೆಯ, ಬಿಝಿನೆಸ್ ಬೇ ಮೆಟ್ರೋ ಸ್ಟೇಶನ್ ಬಳಿ ಶುಭಾರಂಭಗೊಂಡಿದೆ. ಸಲ್ಮಾನ್ ಮುಹಮ್ಮದ್ ಅಲ್-ಶಿಝಾವಿ ಅವರು ರೆಸ್ಟೋರೆಂಟ್ ಉದ್ಘಾಟಿಸಿದರು. ಶೈಖ್ ಅಲ್-ಮಜೀದ್ ಅಲ್-ಮಖ್ತೂಂ ಅವರು ಮುಖ್ಯ ಅತಿಥಿಯಾಗಿದ್ದರು. ಸದ್ರಿ ರೆಸ್ಟೋರೆಂಟಿನಲ್ಲಿ ದಕ್ಷಿಣ ಭಾರತ, ಉತ್ತರ ಭಾರತ ಸೇರಿದಂತೆ ಅರೇಬಿಯನ್, ಮೆಕ್ಸಿಕನ್ ಹಾಗೂ ಚೈನೀಸ್ ಆಹಾರಗಳು ಲಭ್ಯವಿದೆ. ಸುಮಾರು 4000 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ರೆಸ್ಟೋರೆಂಟಿನಲ್ಲಿ ಏಕಕಾಲದಲ್ಲಿ 100 ಮಂದಿ ಅತಿಥಿಗಳನ್ನು ಸ್ವೀಕರಿಸುವಷ್ಟರ ಮಟ್ಟಿನ ಡೈನಿಂಗ್ ಕೊಠಡಿ ವ್ಯವಸ್ಥೆಯನ್ನು ಒಳಗೊಂಡಿದೆ.
  • Blogger Comments
  • Facebook Comments

0 comments:

Post a Comment

Item Reviewed: ದುಬೈಯಲ್ಲಿ ಕನ್ನಡಿಗರಿಂದ ಬೇ ಬೈಟ್ಸ್ ರೆಸ್ಟೋರೆಂಟ್ ಶುಭಾರಂಭ Rating: 5 Reviewed By: karavali Times
Scroll to Top