ಬಂಟ್ವಾಳ, ಜ. 08, 2021 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಇದರ ವತಿಯಿಂದ ಕಳೆದ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 85ಕ್ಕಿಂತ ಅಧಿಕ ಅಂಕ ಪಡೆದ ಎಸೋಸಿಯೇಶನ್ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ ಹಾಗೂ ಎಸೋಸಿಯೇಶನ್ ವಾರ್ಷಿಕ ಮಹಾಸಭೆಯು ಜನವರಿ 10 ರಂದು ಭಾನುವಾರ ಬೆಳಿಗ್ಗೆ ಬಿ.ಸಿ.ರೋಡಿನ ರಾಜರಾಜೇಶ್ವರಿ ಕಾಂಪ್ಲೆಕ್ಸಿನ ಯೂನಿಕ್ ಎಜುಕೇರ್ ಸಭಾಂಗಣದಲ್ಲಿ ನಡೆಯಲಿದೆ.
ಬಂಟ್ವಾಳ ತಾಲೂಕಿನಲ್ಲಿ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ 98 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಮಯ್ಯರಬೈಲಿನ ದುರ್ಗಾ ಪ್ರಿಂಟರ್ಸ್ ಮಾಲಕ ರಮೇಶ್ ಅವರ ಪುತ್ರಿ ಚೈತ್ರಾಂಜಲಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ 93 ಅಂಕ ಪಡೆದ ದರಿಬಾಗಿಲಿನ ಮಾಧವ ಅವರ ಪುತ್ರಿ ಹರ್ಷಿತಾ ಹಾಗೂ ಡಿಸ್ಟಿಂಕ್ಷನ್ ಪಡೆದ ಪಾಣೆಮಂಗಳೂರಿನ ತರುಣ್ ಪ್ರಿಂಟರ್ಸ್ ಕಾರ್ಮಿಕ ಅನ್ವರ್ ಅಬೂಬಕ್ಕರ್-ಬೀಪಾತುಮ್ಮ ದಂಪತಿಯ ಪುತ್ರಿ ಹಫೀಫಾ ಸುನೈನಾ ಅವರು ಈ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾನಿಧಿ ಪಡೆಯಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಎಸೋಸಿಯೇಶನ್ ಅಧ್ಯಕ್ಷ ಈಶ್ವರ ಕುಮಾರ್ ಭಟ್ ವಹಿಸಲಿದ್ದು, ಬಳಿಕ ಎಸೋಸಿಯೇಶನ್ ವಾರ್ಷಿಕ ಮಹಾಸಭೆ ನಡೆಯಲಿದೆ. ತಾಲೂಕಿನ ಎಲ್ಲಾ ಮುದ್ರಣ ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಸೋಸಿಯೇಶನ್ ಕಾರ್ಯದರ್ಶಿ ಯಾದವ ಅಗ್ರಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment