ಬಂಟ್ವಾಳ, ಜ. 10, 2021 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ಇದರ ವತಿಯಿಂದ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 85ಕ್ಕಿಂತ ಅಧಿಕ ಅಂಕ ಪಡೆದ ಎಸೋಸಿಯೇಶನ್ನಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ ಹಾಗೂ ಎಸೋಸಿಯೇಶನ್ ವಾರ್ಷಿಕ ಮಹಾಸಭೆಯು ಭಾನುವಾರ (ಜ. 10) ಬಿ.ಸಿ.ರೋಡಿನ ರಾಜರಾಜೇಶ್ವರಿ ಕಾಂಪ್ಲೆಕ್ಸ್‍ನಲ್ಲಿರುವ ಯೂನಿಕ್ ಎಜುಕೇರ್ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ತಾಲೂಕಿನಲ್ಲಿ ಪಿಯುಸಿಯಲ್ಲಿ ಶೇ. 98 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಮಯ್ಯರಬೈಲಿನ ದುರ್ಗಾ ಪ್ರಿಂಟರ್ಸ್‍ನ ರಮೇಶ ಅವರ ಪುತ್ರಿ ಚೈತ್ರಾಂಜಲಿ, ಡಿಸ್ಟಿಂಕ್ಷನ್ ಪಡೆದ ಪಾಣೆಮಂಗಳೂರಿನ ತರುಣ್ ಪ್ರಿಂಟರ್ಸ್ ಕಾರ್ಮಿಕ ಅನ್ವರ್ ಅಬೂಬಕ್ಕರ್-ಬೀಪಾತುಮ್ಮಾ ದಂಪತಿಗಳ ಪುತ್ರಿ ಹಫೀಫಾ ಸುನೈನಾ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇಕಡಾ 93 ಅಂಕ ಪಡೆದ ದರಿಬಾಗಿಲಿನ ಮಾಧವ ಅವರ ಪುತ್ರಿ ಹರ್ಷಿತಾ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾನಿಧಿ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸೋಸಿಯೇಶನ್ ಅಧ್ಯಕ್ಷ ಈಶ್ವರ ಕುಮಾರ್ ಭಟ್ ಮಾತನಾಡಿ, ಯಾವುದೇ ಸಂಘಟನೆಯು ಉತ್ತಮವಾಗಿ ಬೆಳೆಯಬೇಕಾದರೆ ಅಲ್ಲಿ ಪ್ರತಿಯೊಬ್ಬರ ಪರಿಶ್ರಮದ ಅಗತ್ಯ ಇದೆ. ಹಾಗಾಗಿ ಒಂದೇ ಮನಸ್ಸಿನಿಂದ ದುಡಿದಾಗ ಮಾತ್ರ ಉತ್ತಮವಾಗಿ ಬೆಳೆಯಲು ಸಾಧ್ಯ ಎಂದರು.
ಎಸೋಸಿಯೇಶನ್ ಸ್ಥಾಪಕಾಧ್ಯಕ್ಷ ಲಿಯೋ ಬಾಸಿಲ್ ಫೆರ್ನಾಂಡೀಸ್, ಉಪಾಧ್ಯಕ್ಷ ವಿದ್ಯಾಧರ್ ಜೈನ್, ಪ್ರಮುಖರಾದ ಪಿ. ಮಂಜಪ್ಪ ಅರಳ, ಹರೀಶ ವೀರಕಂಭ, ಪೂರ್ಣಿಮಾ ಮಂಚಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಯಾದವ ಅಗ್ರಬೈಲು ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿದರು. ವೈಷ್ಣವಿ ವೈ.ಕೆ. ಪ್ರಾರ್ಥನೆ ಮಾಡಿದರು.
10 January 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment