ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು (ಅಧ್ಯಕ್ಷ) |
ಅಬ್ದುಲ್ ಅಝೀಝ್ ಹಕ್ (ಪ್ರಧಾನ ಕಾರ್ಯದರ್ಶಿ) |
ಮಂಗಳೂರು, ಜ. 08, 2021 (ಕರಾವಳಿ ಟೈಮ್ಸ್) : ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಇದರ ನೂತನ ಅಧ್ಯಕ್ಷರಾಗಿ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಹಕ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜನವರಿ 7 ರಂದು ಸಂಜೆ ಕಂಕನಾಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಗೌರವಾಧ್ಯಕ್ಷರಾಗಿ ಯೂಸುಫ್ ವಕ್ತಾರ್, ಉಪಾಧ್ಯಕ್ಷರುಗಳಾಗಿ ಖಾಲಿದ್ ಉಜಿರೆ, ಶಾಹುಲ್ ಹಮೀದ್ ಮೆಟ್ರೊ, ಅಬ್ದುಲ್ ಲತೀಫ್ ನೇರಳಕಟ್ಟೆ, ಅಹ್ಮದ್ ಬಾವ ಬಜಾಲ್, ಕಾರ್ಯದರ್ಶಿಗಳಾಗಿ ಟಿ.ಎಂ. ಶಹೀದ್ ಸುಳ್ಯ, ಎಂ.ಎಸ್. ಸಿದ್ದೀಕ್ ಫರಂಗಿಪೇಟೆ, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಇಸ್ಮಾಯಿಲ್ ಪೆರಿಂಜೆ, ಡಿ. ಹಬೀಬುಲ್ಲ ಕಣ್ಣೂರು, ಹಸನಬ್ಬ ಮೂಡಬಿದ್ರೆ, ಅಬ್ಬಾಸ್ ಬಿಜೈ, ಹನೀಫ್ ಬಜಾಲ್, ಅಬ್ದುಲ್ ಹಕೀಂ ಕೂರ್ನಡ್ಕ, ಇ.ಕೆ. ಹುಸೈನ್ ಕೂಳೂರು, ಕೋಶಾಧಿಕಾರಿಯಾಗಿ ನಿಸಾರ್ ಫಕೀರ್ ಮುಹಮ್ಮದ್, ಸಂಘಟನಾ ಕಾರ್ಯದರ್ಶಿಗಳಾಗಿ ಇಬ್ರಾಹಿಂ ನಡುಪದವು, ಎನ್.ಇ. ಮುಹಮ್ಮದ್, ಬಶೀರ್ ಮೊಂಟೆಪದವು, ಕೆ.ಸಿ. ಹುಸೈನ್, ಅಮೀರ್ ಹರೇಕಳ, ಯು. ಮುಸ್ತಫ ಆಲಡ್ಕ, ಪಿ.ಸಿ. ಆದಂ ಪೆರಿಂಜೆ, ಎಂ.ಪಿ. ಅಬ್ದುಲ್ ಖಾದರ್, ಗೌರವ ಸಲಹೆಗಾರರಾಗಿ ಬಿ.ಎಂ. ಮುಮ್ತಾಝ್ ಅಲಿ, ಜೆ. ಹುಸೈನ್, ಬಿ.ಎ. ಮುಹಮ್ಮದ್ ಹನೀಫ್, ಮುಹಮ್ಮದ್ ಕುಂಜತ್ ಬೈಲ್, ಅಬ್ದುಲ್ ಲತೀಫ್ ಕಂದಕ್, ನಾಸಿರ್ ಲಕ್ಕಿಸ್ಟಾರ್, ಎಫ್.ಎ. ಅಬ್ದುಲ್ ಖಾದರ್, ಯಾಕುಬ್ ಗುರುಪುರ, ಅಲಿ ಅಬ್ಬಾಸ್ ಸೂರಲ್ಪಾಡಿ,
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಿಯಾಝ್ ಹುಸೈನ್ ಬಂಟ್ವಾಳ, ಎಂ.ಟಿ. ಕರೀಂ, ಬಿ.ಎ. ಅಬೂಬಕ್ಕರ್ ಕಲ್ಲಾಡಿ, ಹಾರಿಸ್ ಪಿ., ಕೆ.ಸಿ. ಅಬ್ದುಲ್ ಖಾದರ್, ನಿಸಾರ್ ಮುಹಮ್ಮದ್, ಮನ್ಸೂರ್ ಅವರನ್ನು ಆರಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್. ಅಬೂಬಕ್ಕರ್ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಯೂಸುಫ್ ವಕ್ತಾರ್ ಲೆಕ್ಕಪತ್ರ ಮಂಡಿಸಿ, ವಂದಿಸಿದರು.
0 comments:
Post a Comment