ಜೈಪುರ, ಡಿ. 09, 2020 (ಕರಾವಳಿ ಟೈಮ್ಸ್) : ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಗಳಿಸಿದ್ದು, ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ಹಿನ್ನಡೆ ಅನುಭವಿಸಿದೆ. 4,371 ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ ಬಿಜೆಪಿ 1,835, ಕಾಂಗ್ರೆಸ್ 1,718 ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ 56 ಮಂದಿ, 420 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜಿಲ್ಲಾ ಪರಿಷತ್ ಒಟ್ಟು 636 ಸ್ಥಾನಗಳ ಪೈಕಿ ಬಿಜೆಪಿ 266, ಕಾಂಗ್ರೆಸ್ 204 ಸ್ಥಾನಗಳನ್ನು ಗೆದ್ದುಕೊಂಡಿದೆ.
ಸಚಿನ್ ಪೈಲಟ್ ಪ್ರತಿನಿಧಿಸುತ್ತಿರುವ ಟೋಂಕ್ ಕ್ಷೇತ್ರದ ಒಟ್ಟು 25 ಸ್ಥಾನಗಳ ಪೈಕಿ ಬಿಜೆಪಿ 15 ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದುಕೊಂಡಿದೆ. ನ. 23, ನ.27, ಡಿ.1, ಡಿ.5 ರಂದು ಒಟ್ಟು 4 ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು.
0 comments:
Post a Comment