ಬಂಟ್ವಾಳ, ಡಿ. 11, 2020 (ಕರಾವಳಿ ಟೈಮ್ಸ್) : ತಾಲೂಕಿನ ಉಳಿ ಗ್ರಾಮ ಪಂಚಾಯತ್ 2ನೇ ವಾರ್ಡಿಗೆ ಪಕ್ಷೇತರ ಅಭ್ಯರ್ಥಿಯಾಗಿ ಯುವ ನ್ಯಾಯವಾದಿ ತೌಸೀಫ್ ಅಹಮದ್ ಅಂತರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ತೌಸೀಪ್ ಅಹಮದ್ ಅವರು ಉಳಿ ಗ್ರಾಮದ ಅಂತರ ನಿವಾಸಿಯಾಗಿದ್ದು, ಇವರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ. ಅಲ್ಲದೆ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಯುವ ನ್ಯಾಯವಾದಿಗಳಾದ ಮೋಹನ್ ಕುಮಾರ್ ಕಡೇಶಿವಾಲಯ, ತುಳಸೀದಾಸ್.ವಿಟ್ಲ, ಮಹಮ್ಮದ್ ಅಶ್ರಫ್ ಕುಕ್ಕಾಜೆ, ಸುದರ್ಶನ್ ಸನಿಲ್ ಮೊದಲಾದವರು ಜೊತೆಗಿದ್ದರು.
0 comments:
Post a Comment