ಕ್ಯಾನ್ ಬೆರಾ, ಡಿ. 02, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಬುಧವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 13 ರನ್‍ಗಳ ರೋಚಕ ಜಯಗಳಿಸುವ ಮೂಲಕ ಕ್ಲೀನ್ ಸ್ವೀಪ್ ಅಗೌರವದಿಂದ ಪಾರಾಗಿದೆ.
ಇಲ್ಲಿನ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 302 ರನ್ ಕಲೆ ಹಾಕುವ ಮೂಲಕ ಅತಿಥೇಯ ಅಸೀಸ್ ತಂಡಕ್ಕೆ ಗೆಲ್ಲಲು 303 ರನ್‍ಗಳ ಗುರಿ ನಿಗದಿಪಡಿಸಿತ್ತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 289 ರನ್‍ಗಳಿಗೆ ಆಲೌಟ್ ಆಗುವ ಮೂಲಕ 13 ರನ್‍ಗಳಿಂದ ಭಾರತಕ್ಕೆ ಶರಣಾಗಿದೆ.
ಆಸ್ಟ್ರೇಲಿಯಾ ಪರ ಆರೋನ್ ಪಿಂಚ್ 75, ಹೆನ್ರಿಕ್ಸ್ 22, ಗ್ರೀನ್ 21, ಕೆರ್ರಿ 38, ಮ್ಯಾಕ್ಸ್ ವೆಲ್ 59, ಅಗರ್ 28 ರನ್ ಬಾರಿಸಿದರು. ಭಾರತ ಪರ ಬೌಲಿಂಗ್‍ನಲ್ಲಿ ಶಾರ್ದೂಲ್ ಠಾಕೂರ್ 3, ಜಸ್ ಪ್ರೀತ್ ಬುಮ್ರಾ, ನಟರಾಜನ್ ತಲಾ 2 ವಿಕೆಟ್ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ಅಜೇಯ 92, ರವೀಂದ್ರ ಜಡೇಜಾ ಅಜೇಯ 66, ನಾಯಕ ವಿರಾಟ್ ಕೊಹ್ಲಿ 63 ರನ್ ಸಿಡಿಸಿ ಭಾರv 300 ರ ಗಡಿ ದಾಟಲು ನೆರವಾದರು. ಆರಂಭಿಕರಾದ ಶಿಖರ್ ಧವನ್ ಕೇವಲ 16 ರನ್ ಗಳಿಸಿ ನಿರಾಶೆ ಮೂಡಿಸಿದರೆ, ಎಸ್. ಗಿಲ್ 33, ಶ್ರೇಯಸ್ ಅಯ್ಯರ್ 19, ಕೆ.ಎಲ್. ರಾಹುಲ್ 5 ರನ್ ಗಳಿಸಿ ಅಗ್ಗಕ್ಕೆ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯಾ ಪರ ಆಸ್ಟನ್ ಅಗರ್ 2, ಜೋಶ್ ಹ್ಯಾಝೆಲ್‍ವುಡ್, ಸೀನ್ ಅಬೊಟ್ಟ್, ಮತ್ತು ಆಡಂ ಜಂಪಾ ತಲಾ ಒಂದು ವಿಕೆಟ್ ಪಡೆದರು. ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಇಂದಿನ ಜಯ ಭಾರತದ ಪಾಲಿಗೆ ವೈಟ್‍ವಾಶ್ ಅಗೌರವದಿಂದ ಪಾರುಮಾಡಿತಷ್ಟೆ.
0 comments:
Post a Comment