ಸುಳ್ಯ, ಡಿ. 14, 2020 (ಕರಾವಳಿ ಟೈಮ್ಸ್) : ಇಲ್ಲಿನ ಖಾಸಗಿ ಶಾಲೆಯ ಉದ್ಯೋಗಿ, ಸುಳ್ಯ ದೇವಚಳ್ಳ ಗ್ರಾಮದ ನಿವಾಸಿ ಅನಿಲ್ ಎಂಬಾತ ಶಾಲಾ ಬಾಲಕಿಗೆ ಸೈಕಲ್ ಸವಾರಿ ಕಲಿಸುವ ನೆಪವೊಡ್ಡಿ ಶಾಲೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ ಆರೋಪದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಆರೋಪಿ ಬಾಲಕಿಯ ತಂದೆಯ ಪರಿಚಿತನಾಗಿದ್ದು, ಇದನ್ನೇ ಬಳಸಿಕೊಂಡ ಆರೋಪಿ ಡಿಸೆಂಬರ್ 10 ರಂದು ಅಪರಾಹ್ನ 3.30ರ ವೇಳೆಗೆ ಆರೋಪಿ ಈ ಕೃತ್ಯ ನಡೆಸಿದ್ದು, ದೈಹಿಕವಾಗಿ ಬಳಲಿದ್ದ ಬಾಲಕಿಯನ್ನು ಮನೆ ಮಂದಿ ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಡಿ 13 ರಂದು ಬಾಲಕಿಯ ತಾಯಿ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೆÇಲೀಸ್ ಠಾಣೆಯಲ್ಲಿ ಕಲಂ 376 ಐಪಿಸಿ ಮತ್ತು 5(ಎಫ್)(ಎಂ) 6, 10 ಪೋಕ್ಸೋ ಆಕ್ಟ್ 2012 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment