ಬಂಟ್ವಾಳ, ಡಿ. 10, 2020 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಬಂಟ್ವಾಳ ಯೋಜನಾ ಕಛೇರಿಗೆ ಸಂಬಂಧಪಟ್ಟ ತಾಲೂಕಿನ ಅತ್ಯಂತ ಬಡ ಮತ್ತು ಅಶಕ್ತ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹಾಗೂ ತಾಲೂಕು ಯೋಜನಾಧಿಕಾರಿ ಜಯನಂದ ಪಿ ಅವರು ಒಟ್ಟು 21 ಕುಟುಂಬಗಳಿಗೆ ವಿತರಿಸಿದರು.
ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಈ ಕಿಟ್ ವಿತರಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಾಧಿಕಾರಿಗಳ ಆಶಯದಂತೆ ಅಗತ್ಯ ಬೇಡಿಕೆ ಇರುವ ವಸ್ತುಗಳನ್ನು ಅವರ ಮನೆಗೆ ತಲುಪಿಸುವ ಯೋಜನೆ ಇದಾಗಿದೆ. ಅಗತ್ಯ ಸಾಮಾಗ್ರಿಗಳಾದ ಉಡುಪುಗಳು, ಅಡುಗೆ ಪಾತ್ರೆಗಳು, ಬೆಡ್ ಶೀಟ್ ಹಾಗೂ ತಲೆದಿಂಬು ಮೊದಲಾದವುಗಳು ಕಿಟ್ ಒಳಗೊಂಡಿದೆ. ಈ ಸಂದರ್ಭ ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.
0 comments:
Post a Comment