ತೀರ್ಥಹಳ್ಳಿ, ಡಿಸೆಂಬರ್ 26, 2020 (ಕರಾವಳಿ ಟೈಮ್ಸ್) : ಇಲ್ಲಿನ ರಾಮಕ್ಷತ್ರಿಯ ಸಂಘದ ಕಾರ್ಯಕಾರಿಣಿ ಸಭೆ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ ಷಣ್ಮುಖ ಅವರು ಸಭಾದ್ಯಕ್ಷತೆ ವಹಿಸಿದ್ದರು.
ತೀರ್ಥಹಳ್ಳಿಯಲ್ಲಿ ವಿಶ್ವ ರಾಮಕ್ಷತ್ರೀಯ ಸಂಘದ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಮಾದವ ಮಂಗಲ ಕಲ್ಯಾಣ ಮಂಟಪದಲ್ಲಿ ಜನವರಿ 31 ರಂದು ವಿಶ್ವ ರಾಮ ಕ್ಷತ್ರಿಯ ಸಂಘದ ಸಹಯೋಗದೊಂದಿಗೆ ನಡೆಸಲು ತೀರ್ಮಾನಿಸಲಾಯಿತು. ಗೌರವಾದ್ಯಕ್ಷ ಮಂಜುನಾಥ ಅವರು ಸಭೆಗೆ ಸಲಹೆ ಸೂಚನೆ ಹಾಗೂ ಮಾರ್ಗದರ್ಶ ನೀಡಿದರು. ಕಾರ್ಯದರ್ಶಿ ಕೆ. ನಾಗೇಶ್ ಸಂಘದ ಸದಸ್ಯರ ಕರ್ತವ್ಯ ಮತ್ತು ಸಂಘದ ಬೈಲಾ ಹಾಗೂ ನಿಬಂಧನೆಗಳ ಬಗ್ಗೆ ತಿಳಿಸಿದರು.
ಕೋಶಾಧಿಕಾರಿ ಗೋಪಾಲ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಸುಬ್ರಮಣ್ಯ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಸದಸ್ಯರ ಪಾತ್ರದ ಬಗ್ಗೆ ತಿಳಿಸಿದರು. ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ ಷಣ್ಮುಖ ಅವರು ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಮಹಿಳಾ ಸಂಘದ ಕಾರ್ಯದರ್ಶಿ ನಾಗರತ್ನ ಮಾತನಾಡಿದರು.
ಕೋಶಾಧಿಕಾರಿ ಸಂಗೀತ ಮಂಜುನಾಥ್, ಪುರುಷ ಸಂಘದ ಸಹ ಕಾರ್ಯದರ್ಶಿ ವೆಂಕಟೇಶ್, ಯುವಕ ಸಂಘದ ಸಂಘಟನಾ ಕಾರ್ಯದರ್ಶಿ ದಿನೇಶ್ ಕೆ. ಪುರುಷ, ಮಹಿಳಾ ಮತ್ತು ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು ಬಾಗವಹಿಸಿದ್ದರು.
0 comments:
Post a Comment