ರೂಪಾಂತರಿ ಕೊರೋನಾ ಭೀತಿ ಹಿನ್ನಲೆ : ರಾಜ್ಯಾದ್ಯಂತ ಇಂದಿನಿಂದಲೇ ನೈಟ್ ಕಫ್ರ್ಯೂ ಜಾರಿ - Karavali Times ರೂಪಾಂತರಿ ಕೊರೋನಾ ಭೀತಿ ಹಿನ್ನಲೆ : ರಾಜ್ಯಾದ್ಯಂತ ಇಂದಿನಿಂದಲೇ ನೈಟ್ ಕಫ್ರ್ಯೂ ಜಾರಿ - Karavali Times

728x90

23 December 2020

ರೂಪಾಂತರಿ ಕೊರೋನಾ ಭೀತಿ ಹಿನ್ನಲೆ : ರಾಜ್ಯಾದ್ಯಂತ ಇಂದಿನಿಂದಲೇ ನೈಟ್ ಕಫ್ರ್ಯೂ ಜಾರಿ



ಬೆಂಗಳೂರು, ಡಿ. 23, 2020 (ಕರಾವಳಿ ಟೈಮ್ಸ್) : ಕೊರೋನಾ ಆರ್ಭಟದ ಬಳಿಕ ಇದೀಗ ಬ್ರಿಟಿಷ್ ದೇಶದಲ್ಲಿ ಕಾಣಿಸಿಕೊಂಡ ರೂಪಾಂತರಿ ಕೊರೊನಾ ವೈರಸ್ ಆತಂಕ ಮತ್ತೆ ಜಗತ್ತಿನಾದ್ಯಂತ ಹುಟ್ಟು ಹಾಕಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರಕಾರ ಕೂಡಾ ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ (ಡಿ 23) ರಾತ್ರಿಯಿಂದಲೇ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದೆ. ಜನವರಿ 2 ರವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.  

ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭ ಸಂಭ್ರಮದ ಜೊತೆ ಲೀನವಾಗುವ ಜನ ಮಾರ್ಗಸೂಚಿಗಳನ್ನು ಮೀರಿ ನಡೆಯುವ ಸಾಧ್ಯತೆ ಇರುವುದರಿಂದ ರಾಜ್ಯ ಸರಕಾರ ಈ ದೃಢ ನಿರ್ಧಾರಕ್ಕೆ ಬಂದಿದೆ. ಕೇಂದ್ರ ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಕ್ರಮಗಳನ್ನು ಅಳವಡಿಸುವ ಸಂಬಂಧ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ತೀರ್ಮಾನ ಪ್ರಕಟಿಸಿದ್ದಾರೆ.

ಸೋಂಕು ನಿಯಂತ್ರಣಕ್ಕೆ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಇಂದಿನಿಂದ 9 ದಿನಗಳ ಕಾಲ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಪ್ರಕಾರ ಜನ ಹೆಚ್ಚಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ ಎಂದರು. ಕೋವಿಡ್-19 ವೈರ್ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಸಿಎಂ ಮನವಿ ಮಾಡಿದ್ದಾರೆ.

ವಿದೇಶದಿಂದ ಆಗಮಿಸುವ ಪ್ರತಿಯೊಬ್ಬರಿಗೂ ಕೋವಿಡ್ ಸೋಂಕು ಪರೀಕ್ಷೆ ಕಡ್ಡಾಯವಾಗಿದ್ದು, ಎಲ್ಲೆ ಪ್ರಯಾಣಿಸಲಿ, ಈ ಕುರಿತ ಪ್ರಮಾಣ ಪತ್ರವನ್ನು ಹೊಂದುವುದು ಅಗತ್ಯವಾಗಿದೆ. ರಾಜ್ಯಕ್ಕೆ ಆಗಮಿಸುವ 72 ಗಂಟೆಗಳಿಗೆ ಮುನ್ನ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಬೇಕು ಎಂದರು.

ಹೊರದೇಶದಿಂದ ಬರುವ ಪ್ರಯಾಣಿಕರಿಗಾಗಿ ವಿಮಾನ ನಿಲ್ದಾಣದಲ್ಲಿಯೂ ಸೋಂಕು ಪತ್ತೆಗೆ ಪರೀಕ್ಷಾ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಅಗತ್ಯ ಸೇವೆಗಳು ಹೊರತುಪಡಿಸಿ, ಇತರೆ ವ್ಯಾಪಾರ-ವಹಿವಾಟುಗಳನ್ನು ಬಂದ್ ಮಾಡಬೇಕು. ಜನವರಿ 2 ರ ಬೆಳಗ್ಗೆ 6 ಗಂಟೆವರೆಗೆ ಈ ನಿಷೇಧಾಜ್ಞೆ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ. ಆ ಮೂಲಕ ಹೊಸ ಕೊರೋನಾ ರೂಪಾಂತರದ ಅಲೆಯ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಆ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಇಂದು ಸಂಜೆ 5 ಗಂಟೆಯೊಳಗೆ ನೈಟ್ ಕರ್ಫ್ಯೂ ಸಂಬಂಧಿತ ಮಾರ್ಗಸೂಚಿಯನ್ನು ರಾಜ್ಯ ಸರಕಾರ ಬಿಡುಗಡೆ ಮಾಡಲಿದೆ ಎಂದವರು ತಿಳಿಸಿದ್ದಾರೆ. 









  • Blogger Comments
  • Facebook Comments

0 comments:

Post a Comment

Item Reviewed: ರೂಪಾಂತರಿ ಕೊರೋನಾ ಭೀತಿ ಹಿನ್ನಲೆ : ರಾಜ್ಯಾದ್ಯಂತ ಇಂದಿನಿಂದಲೇ ನೈಟ್ ಕಫ್ರ್ಯೂ ಜಾರಿ Rating: 5 Reviewed By: karavali Times
Scroll to Top