ಬೆಂಗಳೂರು, ಡಿ. 23, 2020 (ಕರಾವಳಿ ಟೈಮ್ಸ್) : ರೂಪಾಂತರಿ ಕೊರೊನಾ ವೈರಸ್ ಆತಂಕದಿಂದ ಕರ್ನಾಟಕ ಸರಕಾರ ಇಂದು ರಾತ್ರಿಯಿಂದಲೇ ದಿಢೀರ್ ಕೈಗೊಂಡಿದ್ದ ರಾತ್ರಿ ಕರ್ಫ್ಯೂ ಆದೇಶದಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಿಗೆ ಸರಕಾರ ತನ್ನ ನಿರ್ಧಾರದಿಂದ ಕೊಂಚ ಬದಲಾವಣೆ ಮಾಡಿಕೊಂಡಿದ್ದು, ಇಂದಿನ ಬದಲಿಗೆ ನಾಳೆ ರಾತ್ರಿಯಿಂದ ನೈಟ್ ಕಫ್ರ್ಯೂ ವಿಧಿಸಿ ಮರು ಆದೇಶ ಹೊರಡಿಸಿದೆ. ಜನವರಿ 2 ಮುಂಜಾನೆ 5 ಗಂಟೆಯವರೆಗೆ ಇದು ಜಾರಿಯಲ್ಲಿರಲಿದೆ.
ಈ ಬಗ್ಗೆ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಟ್ವೀಟ್ ಮಾಡಿ ವಿವರ ನೀಡಿದ್ದು, ಕಫ್ರ್ಯೂ ಸಮಯದಲ್ಲೂ ಸ್ವಲ್ಪ ಬದಲಾವಣೆ ಮಾಡಲಾಗಿದೆ. ರಾತ್ರಿ 10 ರಿಂದ 6 ಇದ್ದು ಸಮಯವನ್ನು ಇದೀಗ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಕಫ್ರ್ಯೂ ಸಮಯವನ್ನು ನಿಗದಿಪಡಿಸಲಾಗಿದೆ. ರಾತ್ರಿ ಕಫ್ರ್ಯೂ ಸಂದರ್ಭ ನಾಳೆ (ಡಿ 24) ರಾತ್ರಿ ಕ್ರಿಸ್ಮಸ್ ಪ್ರಯುಕ್ತ ಇರುವ ವಿಶೇಷ ಪ್ರಾರ್ಥನೆ (ಮಿಡ್ ನೈಟ್ ಮಾಸ್) ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಕೂಡಾ ಸಿಎಂ ತಮ್ಮ ಟ್ವೀಟ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.
0 comments:
Post a Comment