2020 ಕರಾಳ ವರ್ಷವಲ್ಲ, ಜೀವನಕ್ಕೆ ಪಾಠ ಹೇಳಿಕೊಟ್ಟ ವರ್ಷ - Karavali Times 2020 ಕರಾಳ ವರ್ಷವಲ್ಲ, ಜೀವನಕ್ಕೆ ಪಾಠ ಹೇಳಿಕೊಟ್ಟ ವರ್ಷ - Karavali Times

728x90

31 December 2020

2020 ಕರಾಳ ವರ್ಷವಲ್ಲ, ಜೀವನಕ್ಕೆ ಪಾಠ ಹೇಳಿಕೊಟ್ಟ ವರ್ಷ

 


ಡಿ.ಎಸ್.ಐ.ಬಿ ಪಾಣೆಮಂಗಳೂರು

ಸಾವಿರಾರು ಕಷ್ಟ ನೋವುಗಳಿಂದ ಸುಧಾರಿಸುತ್ತ ಒಂದು ವರ್ಷ ಪೂರ್ತಿ ಸರಿಯಾದ ನೆಮ್ಮದಿ ಇಲ್ಲದೆ ಜೀವನ ಸಾಗಿಸುತ್ತ ಬಂದರೂ, 2020 ಕರಾಳ‌ ವರ್ಷ ಎಂದು ಕರೆಯಬಹುದು ಆದರೆ ಈ ವರ್ಷ ತುಂಬಾ ಪಾಠ ಕಲಿಸಿಕೊಟ್ಟಿದೆ.‌ ಕೋವಿಡ್-೧೯ ಕೊರೊನ ಎಂಬ ಮಾರಕ ವೈರಸೊಂದು ಬೆಳೆದು ಜನರ ನಡುವೆ ತಲುಪಿದಾಗ ಜನರ ಕಷ್ಟ, ಸುಖ, ಅಹಂಕಾರ‌, ಜಾತಿ ಧರ್ಮವೆಂದು ಹಾರಾಡುತ್ತಿದ್ದವರಿಗೆಲ್ಲ‌ ಒಂದೊಂದು ರೀತಿಯ ಪಾಠವನ್ನು ಹೇಳಿಕೊಡುತ್ತಾ ಹೋಯಿತು. ಇಲ್ಲಿ ಯಾರು ಇಲ್ಲ ಎಲ್ಲರೂ ಒಂದೇ, ಎಲ್ಲರೂ ಸಮಾನರು ಎಂದು ಸಾರಿ ಸಾರಿ‌ ತೋರಿಸಿಕೊಟ್ಟಿತ್ತು. ಒಂದು ಹೊತ್ತು ಆಹಾರವಿಲ್ಲದೆ ಬದುಕುತ್ತಿದ್ದ ಒಂದು ಬಡ ಜೀವಿಯ ನೋವು ತಿಳಿದಿರಲಿಲ್ಲ. ಕೋಟಿ ಕೋಟಿಯಲ್ಲಿದ್ದವ ಭಿಕ್ಷುಕರಂತೆ ಅನ್ನವನ್ನು ಹುಡುಕಲು ಸಾಧ್ಯವಾಯಿತು. ಅನ್ನದ ಬೆಲೆ ತಿಳಿಯದವರಿಗೂ ಒಂದು ಪಾಠವಾಯಿತು. ಕಸದ ಬುಟ್ಟಿಗೆ ಎಸೆಯುತ್ತಿದ್ದ ಆಹಾರದ ಬೆಲೆ ತಿಳಿಯಲು ಕೂಡ ಸಾಧ್ಯವಾಯಿತು.‌ ಎಲ್ಲವನ್ನೂ ಸರಿಯಾಗಿ ಅರ್ಥೈಸಿದರೆ  2020 ಕರಾಳ ವರ್ಷವಲ್ಲ ಜೀವನಕ್ಕೆ ಪಾಠ ಹೇಳಿಕೊಟ್ಟ ವರ್ಷ.

ಕೊರೊನಾ ಜೀವಜಗತ್ತಿಗೆ ಸವಾಲೊಡ್ಡುವ ಜತೆಗೆ ಬದುಕುವ ಪಾಠವನ್ನೂ ಹೇಳಿಕೊಟ್ಟಿದೆ. ಮನುಷ್ಯ ಸಾಗುತ್ತಿರುವ ವೇಗದ ಬದುಕಿಗೆ ಕಡಿವಾಣ ಹಾಕಿಕೊಳ್ಳದಿದ್ದರೆ ಇಂತಹ ಆಪತ್ತುಗಳು ಇದೇ ಕೊನೆಯಲ್ಲ ಎಂಬ ಸತ್ಯವನ್ನು ಬಹಿರಂಗಪಡಿಸಿದೆ. ಕನಿಷ್ಠ ಅವಶ್ಯಕತೆಗಳನ್ನಷ್ಟೇ ಪೂರೈಸಿಕೊಂಡು ಪ್ರಕೃತಿಯೊಂದಿಗೆ ಬದುಕುವ ಅಗತ್ಯವನ್ನು ಕೊರೊನಾ ಹೇಳಿಕೊಟ್ಟಿದೆ. ದುರಾಸೆ, ದುರಾಕ್ರಮಣಕ್ಕೆ ಮನುಷ್ಯ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ಈ ದುರಿತ ಕಾಲದಲ್ಲಿ ಅರಿವಿಗೆ ಬಂದಿದೆ. ಮಿತಿ ಇಲ್ಲದ ವೇಗದಲ್ಲಿ ಸಾಗುತ್ತಿರುವ ನಗರಗಳು ತತ್ತರಿಸುತ್ತಿರುವಾಗ ಆರೋಗ್ಯ ಕಾಪಾಡಿಕೊಂಡ ಗ್ರಾಮೀಣ ಭಾರತ ಹಳ್ಳಿಯ ಬದುಕೇ ಶ್ರೇಷ್ಠ ಬದುಕು ಎಂಬುದನ್ನು ತೋರಿಸಿಕೊಟ್ಟಿದೆ. ಬದುಕು ಕಟ್ಟಿಕೊಳ್ಳಲು ಪಟ್ಟಣ, ನಗರ ಸೇರಿದವರು, ವಿದೇಶದಲ್ಲಿ ಕುಳಿತು ಭಾರತದಲ್ಲೇನಿದೆ ಮಣ್ಣು? ಎಂದು ಹೀಗಳೆಯುತ್ತಿದ್ದವರಿಗೆ ತಾಯ್ನೆಲದ ಮಹತ್ವದ ಅರಿವಾಗಿದೆ.

ಜಾತಿ‌ ಧರ್ಮಗಳ ನಡುವೆ ವಿಷ ಬೀಜಗಳನ್ನು ಬಿತ್ತಿ ಗಲಭೆಗಳು ಸೃಷ್ಟಿಸಿ ಅಮಾಯಕ ಜೀವವನ್ನು ಬಲಿ ತೆಗೆದುಕೊಳ್ಳುವರಿಗೂ ಉತ್ತಮ ಪಾಠವಾಯಿತು.‌‌ ನಡುವೆ ಅಂತರವನ್ನಿಟ್ಟು ಎಲ್ಲಿ ಅವನಿಂದ ನನಗೆ ವೈರಸ್ ಅಂಟಿಕೊಳ್ಳುತ್ತದೆ ಎಂಬ ಭಯದಿಂದ ದೂರದಲ್ಲಿ‌ ‌ಅಥವಾ ಮನೆಯಲ್ಲಿಯೇ ಇರಬೇಕಾದ ಸನ್ನಿವೇಶ ಬಂದಾಗ ತುಂಬಾ ಪಾಠವನ್ನು ಕಲಿಯಲು ಅವಕಾಶ ಲಭಿಸಿವೆ. ಇಲ್ಲಿ ಯಾರು ಮೇಲಲ್ಲ ಕೀಳಲ್ಲ ಎಲ್ಲರೂ ಸಮಾನರು. ಎಷ್ಟೇ ಶ್ರೀಮಂತನಾಗಿರು ಬಡವನಾಗಿರು ಅಥವಾ ಸಾವಿರಾರು ಕೊಲೆ ಮಾಡಿದವನೇ ಆಗಿರು ಕೇವಲ ಕಣ್ಣಿಗೆ ಕಾಣದ ವೈರಸ್ ಎದುರು ನಾವೇನಿಲ್ಲ ಎಂದು ತಿಳಿದ ನಂತರವೂ ನಾವು ಅಹಂಕಾರದಿಂದ ಜೀವಿಸುತ್ತಿದ್ದೇವೆ ಎಂದರೆ ನಮಗಿಂತ ಮೂರ್ಖರೂ ಇನ್ನೊಬ್ಬರಿಲ್ಲ. ನಾನು ಓರ್ವ ರೌಡಿ, ಎಲ್ಲರೂ ನನ್ನನ್ನು ಹೆದರಿಕೊಳ್ಳುತ್ತಾರೆ ನನ್ನನ್ನು ಕೊಲ್ಲುವ ಧೈರ್ಯಶಾಲಿ ಯಾರಿಗೂ ಇಲ್ಲ ಎಂದು ಕೇವಲ ಅದು ಬಾಯಿ ಮಾತಿಗೆ ಮಾತ್ರ ವಿನಃ ಒಂದು ವೈರಸ್ ಮುಂದೆ ನಾವೇನು ಇಲ್ಲವೆಂದು ಪ್ರತಿಯೊಬ್ಬರೂ ತಿಳಿದಿರುವ ವಿಚಾರವಾಗಿದೆ. ಕಷ್ಟದ ಬದುಕು ಹೇಗೆ ಎಂದು ತಿಳಿಯದವರು 2020ನೇ ಇಸವಿಯಲ್ಲಿ ಕಲಿತರು. ಕಣ್ಣಿಗೆ ಕಂಡರು ಕಾಣದಂತೆ ಬಡ ಜೀವಿಯ ಗೂಡು ಅಂಗಡಿ ಹೋಗದವರು ಕೂಡ ಹಸಿವನ್ನು ನೀಗಿಸಿಕೊಳ್ಳಲು ಸಾಲಾಗಿ ನಿಂತಿರುವುದು ಎಲ್ಲರೂ ಕಂಡಿರುತ್ತಾರೆ. ಅವನು ಕೋಟಿಯಾಧೀಶ್ವರ ಎಲ್ಲರ ಮನೆಬಾಗಿಲಿಗೆ ಕೊರೊನ ಆಹಾರ ಕಿಟ್ ತಲುಪುವಾಗ ಅವನಿಗೂ ಒಂದು ಕಿಟ್ ಸಿಕ್ಕಿರುವುದರಿಂದ ನಾನೇನು ನನ್ನ ಅಂತಸ್ತೇನು ಎಲ್ಲವನ್ನೂ ಕಲಿತು ಬಿಟ್ಟ.

ಸರಳ ಜೀವನಕ್ಕೆ ಪ್ರತ್ಯೇಕವಾಗಿ ಪಾಠ ಕಲಿಸಿಕೊಟ್ಟಿದೆ. ಆಡಂಬರದ ಶೈಲಿಯಲ್ಲಿ ಮದುವೆ ಸಮಾರಂಭಗಳು ನಡೆಯುವಾಗ ಬಡ ಜೀವಿಗಳು ಕಣ್ಣೀರಲ್ಲಿ ಕೈ ತೊಳೆಯುವ ಸ್ಥಿತಿಯಾಗಿತ್ತು. ಅನಾವಶ್ಯಕವಾದ ಜನ ಸೇರ್ಪಡೆ, ಕಸದ ತೊಟ್ಟಿಯಲ್ಲಿ ಆಹಾರವನ್ನು ಎಸೆಯುತ್ತಿದ್ದರು. ಲಕ್ಷಾಂತರ ದುಡ್ಡು ಅಷ್ಟಿಷ್ಟು ಒಡವೆ ವಸ್ತುಗಳನ್ನು ಕೇಳಿ ಹೆಣ್ಣಿನ ಜೀವನಕ್ಕೆ ಅಡ್ಡವಾಗಿ ಬರುತ್ತಿದ್ದ ವರದಕ್ಷಿಣೆಗೆ ಹೆಣ್ಣು ಮಕ್ಕಳು ವಯಸ್ಸಾದರೂ ಮದುವೆ ಆಗದೆ ಮೂಲೆ ಸೇರುತ್ತಿದ್ದರು. ಕೊರೊನ ಎಂಬುದು ಸಮೀಪದಲ್ಲಿ ಸುತ್ತಾಡಿದಾಗ ಜನರಿಗೂ ಕಷ್ಟಗಳು ಅನುಭವವಾದಗ ಸರಳವಾಗಿ ಅಗತ್ಯ ಇರುವವರನ್ನು ಸೇರಿಸಿ ಒಂದು ಬಡ ಹೆಣ್ಣಿಗೆ ಜೀವನ ನೀಡಲು ತುಂಬಾ ಉಪಕಾರಿಯಾಯಿತು. ಸರಳ ಸರಳವಾಗಿ ಜೀವನದಲ್ಲಿ ಹೇಗೆ ಇರಬಹುದು ಎಂಬುದು ಕೊರೊನ ತುಂಬಾ‌ ಪಾಠ ಹೇಳಿ ಕೊಟ್ಟಿದೆ. ಇನ್ನೂ ಸದಾ ಕಾಲವೂ ಸರಳವಾಗಿ ಜೀವಿಸುವುದು ತುಂಬಾ ಮುಖ್ಯವಾಗಿರುತ್ತವೆ.

ನಮ್ಮಿಂದ ಅದೆಷ್ಟೋ ಜೀವಗಳು‌ ಕಣ್ಮರೆಯಾದರು. ಪ್ರತಿಯೊಬ್ಬರ ಗುಣ ನಡತೆಗಳು ನಮಗೆ ತುಂಬಾ ಅರ್ಥೈಸಿಕೊಟ್ಟಿದೆ. ಒಟ್ಟಾಗಿ ಹೇಳಬೇಕಾದರೆ ಎಲ್ಲರಿಗೂ ಎಲ್ಲಾ ರೀತಿಯ ಪಾಠವಾಗಿತ್ತು 2020. ವರ್ಷವನ್ನು ಪೂರೈಸಿ ಮುಂದೆ 2021ನೇ ವರ್ಷಕ್ಕೆ‌ ಕಾಲಿಡುವ ನಾವುಗಳು ಕೇವಲ ಹೊಸ ವರ್ಷವೆಂದು ಸಂಭ್ರಮಿಸಿದೆ, ಹಿಂದಿನ ದಿನಗಳಲ್ಲಿ ಕಲಿತ‌ ಪಾಠಗಳು ಜೀವನದ ಸರಿ ತಪ್ಪುಗಳನ್ನು ಬದಲಾಯಿಸಿ ಮುಂದಿನ‌ ದಿನಗಳಲ್ಲಿ ಬದಲಾವಣೆಯಾಗಿ‌‌ ಉತ್ತಮ ವ್ಯಕ್ತಿಯಾಗಿ ಪ್ರತಿಯೊಬ್ಬರಿಗೂ ನಾವು ಮಾದರಿಯಾಗಬೇಕು.  ಜೀವನ ಹೊಸದೊಂದು ಹರುಷದ ನೆಮ್ಮದಿಯಿಂದ ಕೂಡರಲಿ..

 ಸರ್ವರಿಗೂ ಹೊಸ ವರ್ಷದ ಶುಭಾಶಯಗಳು.







  • Blogger Comments
  • Facebook Comments

0 comments:

Post a Comment

Item Reviewed: 2020 ಕರಾಳ ವರ್ಷವಲ್ಲ, ಜೀವನಕ್ಕೆ ಪಾಠ ಹೇಳಿಕೊಟ್ಟ ವರ್ಷ Rating: 5 Reviewed By: karavali Times
Scroll to Top