ಬಂಟ್ವಾಳ, ಡಿ. 30, 2020 (ಕರಾವಳಿ ಟೈಮ್ಸ್) : ತಾಲೂಕಿನ ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಟ್ಲದಲ್ಲಿ ಬುಧವಾರ ವಿಜೇತ ಅಭ್ಯರ್ಥಿಯ ವಿಜಯೋತ್ಸವ ಮೆರವಣಿಗೆ ವೇಳೆ ಜೀಪ್ ಉರುಳಿ ನೆಟ್ಲ ನಿವಾಸಿ ನರೇಶ್ (30) ಮೃತಪಟ್ಟಿದ್ದು, ವಿಜೇತ ಅಭ್ಯರ್ಥಿ ದೀಪಕ್ ಸೇರಿದಂತೆ ಜಗನ್ನಾಥ್, ಗುರುವಪ್ಪ, ಸುಚಿತ್ರಾ, ನಳಿನಿ, ಯೋಗೀಶ್ ಅವರು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಗೋಳ್ತಮಜಲು ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಬುಧವಾರ ಮತ ಎಣಿಕೆ ನಡೆದ ಬಳಿಕ ವಿಜೇತ ಅಭ್ಯರ್ಥಿ ದೀಪಕ್ ಅವರ ವಿಜಯೋತ್ಸವ ನೆಟ್ಲ ಪರಿಸರದಲ್ಲಿ ನಡೆಯುತ್ತಿದ್ದಾಗ ಅಭ್ಯರ್ಥಿ ಸಹಿತ ಇತರರು ತೆರೆದ ಜೀಪಿನಲ್ಲಿ ಮೆರವಣಿಗೆ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ಮೀರಿ ಜೀಪು ಉರುಳಿ ಬಿದ್ದ ಪರಿಣಾಮ ನರೇಶ್ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment