ಮೂಡಬಿದ್ರೆ ಬಸದಿಯಲ್ಲಿ ಡಿ. 20 ರಂದು ಅಂತರಾಷ್ಟ್ರೀಯ ಮಟ್ಟದ ಜಿನ ಸಮ್ಮಿಲನ : ಆಮಂತ್ರಣ ಪತ್ರಿಕೆ ಬಿಡುಗಡೆ - Karavali Times ಮೂಡಬಿದ್ರೆ ಬಸದಿಯಲ್ಲಿ ಡಿ. 20 ರಂದು ಅಂತರಾಷ್ಟ್ರೀಯ ಮಟ್ಟದ ಜಿನ ಸಮ್ಮಿಲನ : ಆಮಂತ್ರಣ ಪತ್ರಿಕೆ ಬಿಡುಗಡೆ - Karavali Times

728x90

18 December 2020

ಮೂಡಬಿದ್ರೆ ಬಸದಿಯಲ್ಲಿ ಡಿ. 20 ರಂದು ಅಂತರಾಷ್ಟ್ರೀಯ ಮಟ್ಟದ ಜಿನ ಸಮ್ಮಿಲನ : ಆಮಂತ್ರಣ ಪತ್ರಿಕೆ ಬಿಡುಗಡೆ



ಮೂಡುಬಿದಿರೆ, ಡಿ 18, 2020 (ಕರಾವಳಿ ಟೈಮ್ಸ್) : ಇಲ್ಲಿನ ಐತಿಹಾಸಿಕ ಹಿನ್ನಲೆ ಇರುವ ಸಾವಿರ ಕಂಬದ ಬಸದಿಯಲ್ಲಿ  ಡಿ 20 ರಂದು ಅಂತರಾಷ್ಟ್ರೀಯ ಮಟ್ಟದ ಜಿನ ಸಮ್ಮಿಲನ ನಡೆಯಲಿದ್ದು, ಈ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಶುಕ್ರವಾರ ನಡೆಯಿತು. 

ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಜೈನಧರ್ಮ ಪೇಸ್ಬುಕ್ ಪುಟದ ಸಹಭಾಗಿತ್ವದೊಂದಿಗೆ ನಡೆಯುವ ಈ ಸಮ್ಮಿಲನದ ಆಹ್ವಾನ ಪತ್ರಿಕೆಯನ್ನು ಭಗವಾನ್ ಚಂದ್ರನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಬಿಡುಗಡೆಗೊಳಿಸಿದರು. 

ಈ ಸಂದರ್ಭ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಜೈನ್ ಮಿಲನ್ ವಲಯ-8 ರ ನಿರ್ದೇಶಕ ಜಯರಾಜ್ ಕಂಬಳಿ, ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಕಾರ್ಕಳ ಯುವ ಜೈನ್ ಮಿಲನ್ ಕಾರ್ಯದರ್ಶಿ ಸಮೃದ್ಧ್ ಜೈನ್, ಉದ್ಯಮಿ ಸುಬೋಧ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.









  • Blogger Comments
  • Facebook Comments

0 comments:

Post a Comment

Item Reviewed: ಮೂಡಬಿದ್ರೆ ಬಸದಿಯಲ್ಲಿ ಡಿ. 20 ರಂದು ಅಂತರಾಷ್ಟ್ರೀಯ ಮಟ್ಟದ ಜಿನ ಸಮ್ಮಿಲನ : ಆಮಂತ್ರಣ ಪತ್ರಿಕೆ ಬಿಡುಗಡೆ Rating: 5 Reviewed By: karavali Times
Scroll to Top