ಬಂಟ್ವಾಳ, ಡಿ. 29, 2020 (ಕರಾವಳಿ ಟೈಮ್ಸ್) : ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನಲೆಯಲ್ಲಿ ಬಿ ಸಿ ರೋಡು ಸಮೀಪದ ಮೊಡಂಕಾಪು ಬಾಲ ಯೇಸು ದೇವಾಲಯದ ಧರ್ಮಗುರು ವಲೇರಿಯನ್ ಡಿ’ಸೋಜ ಅವರು ನೂತನವಾಗಿ ಇತ್ತೀಚೆಗೆ ಆಯ್ಕೆಯಾದ ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರನ್ನು ಪುರಸಭಾ ಕಛೇರಿಯ ಅಧ್ಯಕ್ಷರ ಛೇಂಬರಿನಲ್ಲಿ ಭೇಟಿಯಾಗಿ ಶುಭಾಶಯ ಕೋರಿದರು.
ಈ ಸಂದರ್ಭ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಹೆರಾಲ್ಡ್ ಡಿ’ಸೋಜ ಹಾಗೂ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಉಪಸ್ಥಿತರಿದ್ದರು.
0 comments:
Post a Comment