ಬಂಟ್ವಾಳ, ಡಿ. 19, 2020 (ಕರಾವಳಿ ಟೈಮ್ಸ್) : ಮದೀನತುಲ್ ಉಲಮಾ ಎಸೋಸಿಯೇಶನ್ ಮಿತ್ತಬೈಲು ಇದರ ಆಶ್ರಯದಲ್ಲಿ ಶೈಖುನಾ ಮರ್ ಹೂಂ ಮಿತ್ತಬೈಲು ಉಸ್ತಾದರ 2ನೇ ಆಂಡ್ ನೇರ್ಚೆ ಪ್ರಯುಕ್ತ ಅನುಸ್ಮರಣಾ ಸಂಗಮ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಶನಿವಾರ ಬೆಳಿಗ್ಗೆ ಮಿತ್ತಬೈಲಿನ ಉಸ್ತಾದರ ನಿವಾಸದಲ್ಲಿ ಚಾಲನೆ ನೀಡಲಾಯಿತು.
ಸುಬ್ ಹಿ ನಮಾಝ್ ಬಳಿಕ ಶೈಖುನಾ ಉಸ್ತಾದರ ಕಬ್ ರ್ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಖತ್ಮುಲ್ ಕುರ್ ಆನ್ ನೆರವೇರಿಸಲಾಯಿತು.
0 comments:
Post a Comment