ಬಂಟ್ವಾಳ, ಡಿ. 15, 2020 (ಕರಾವಳಿ ಟೈಮ್ಸ್) : ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷ, ಮಂಗಳೂರು ಸಹಾಯಕ ಖಾಝಿ ಸಹಿತ ವಿವಿಧ ಧಾರ್ಮಿಕ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸಿದ ಧಾರ್ಮಿಕ ನೇತಾರ ಮರ್‍ಹೂಂ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಅವರ 2ನೇ ವರ್ಷದ ಅನುಸ್ಮರಣೆ (ಆಂಡ್ ನೇರ್ಚೆ) ಡಿ. 19 ರಂದು ಶನಿವಾರ ಮಿತ್ತಬೈಲಿನ ಉಸ್ತಾದರ ಮನೆಯಲ್ಲಿ ನಡೆಯಲಿದೆ.
ಸುಬ್‍ಹಿ ನಮಾಝ್ ಬಳಿಕ ಖತಮುಲ್ ಕುರ್‍ಆನ್, ಬೆಳಿಗ್ಗೆ 10 ಗಂಟೆಗೆ ಅನುಸ್ಮರಣೆ ಹಾಗೂ ಸಂಚಿಕೆ ಬಿಡುಗಡೆ, ಲುಹ್‍ರ್ ನಮಾಝ್ ಬಳಿಕ ಮೌಲಿದ್ ಪಾರಾಯಣ ಹಾಗೂ ತಬರ್ರುಕ್ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಡಿನ ಸರ್ವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಸ್ತಾದರ ಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ ತಿಳಿಸಿದ್ದಾರೆ.
0 comments:
Post a Comment