ಮಂಗಳೂರು, ಡಿ. 30, 2020 (ಕರಾವಳಿ ಟೈಮ್ಸ್) : ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಜನ ಮೈ ಮರೆಯುವ ಹಿನ್ನಲೆಯಲ್ಲಿ ಕೊರೋನಾಘಾತ ಉಂಟಾಗುವ ಭೀತಿಗಾಗಿ ಮಂಗಳೂರಿನ ಕಡಲ ಕಿನಾರೆಗಳಿಗೆ ಪ್ರವಾಸಿಗಳ ಪ್ರವೇಶ ನಿರ್ಬಂಧಿಸಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ಡಿ. 31 ರ ಮಧ್ಯಾಹ್ನ 2 ಗಂಟೆಯಿಂದ ಜ. 2 ರ ಮಧ್ಯಾಹ್ನ 2 ಗಂಟೆಯವರೆಗೆ ಈ ಬೀಚ್ ಪ್ರವೇಶ ನಿರ್ಬಂಧ ಜಾರಿಯಲ್ಲಿರಲಿದ್ದು, ಮಂಗಳೂರಿನ ಉಳ್ಳಾಲ, ಸೋಮೇಶ್ವರ, ಸಸಿಹಿತ್ಲು, ತಣ್ಣೀರುಬಾವಿ, ಮೊಗವೀರಪಟ್ಣ, ಸುರತ್ಕಲ್, ಪಣಂಬೂರು ಸೇರಿದಂತೆ ನಗರದ ಎಲ್ಲಾ ಬೀಚ್ ಗಳಲ್ಲಿ ಈ ನಿರ್ಬಂಧ ಇರಲಿದೆ. ಸ್ಥಳೀಯರು, ಸಾಂಪ್ರದಾಯಿಕ ಮೀನುಗಾರರು ಹೊರತುಪಡಿಸಿ ಎಲ್ಲಾ ಪ್ರವಾಸಿಗರಿಗೆ ಬೀಚ್ ಪ್ರವೇಶ ನಿಷೇಧಿಸಿ ಡೀಸಿ ಆದೇಶ ಹೊರಡಿಸಿದ್ದಾರೆ.
0 comments:
Post a Comment