ಸನ್ಮಾನಿಸಲ್ಪಡುವವರು
|
ಉಪ್ಪೇಂದ್ರ ಮೂಲ್ಯ (ಧಾರ್ಮಿಕ ಕ್ಷೇತ್ರ) |
|
ಚಂದಪ್ಪ ಮೂಲ್ಯ (ಕೃಷಿ ಕ್ಷೇತ್ರ) |
|
ಕಿಟ್ಟು ಮೂಲ್ಯ (ಸಮಾಜ ಸೇವೆ) |
|
ಎಚ್ಕೆ ನೈನಾಡು (ಸಾಂಸ್ಕೃತಿಕ ಕ್ಷೇತ್ರ) |
|
ಮಾಧವ ಬಿ.ಸಿ.ರೋಡು (ಕ್ರೀಡಾ ಕ್ಷೇತ್ರ) |
ಬಂಟ್ವಾಳ, ಡಿ. 25, 2020 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಕುಂಬಾರ ಯುವ ವೇದಿಕೆಗಳ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪದಪ್ರಧಾನ ಸಮಾರಂಭ ಡಿಸೆಂಬರ್ 27 ರಂದು ಬಿ.ಸಿ.ರೋಡಿನ ಪೊಸಳ್ಳಿ ಕುಲಾ ಭವನದಲ್ಲಿ ನಡೆಯಲ್ಲಿದೆ.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳಾದ ಧಾರ್ಮಿಕ ಕ್ಷೇತ್ರದಲ್ಲಿ ಉಪ್ಪೇಂದ್ರ ಮೂಲ್ಯ, ಕೃಷಿ ಕ್ಷೇತ್ರದಲ್ಲಿ ಚಂದಪ್ಪ ಮೂಲ್ಯ, ಸಮಾಜ ಸೇವೆಯಲ್ಲಿ ಕಿಟ್ಟು ಮೂಲ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಚ್ಕೆ ನೈನಾಡು, ಕ್ರೀಡಾ ಕ್ಷೇತ್ರದಲ್ಲಿ ಮಾಧವ ಬಿ.ಸಿ.ರೋಡು ಇವರುಗಳಿಗೆ ಸನ್ಮಾನ ನಡೆಯಲಿದೆ.
ಚಲನಚಿತ್ರ ನಟ ವಿಶ್ವನಾಥ ಅಸೈಗೋಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೇದಿಕೆ ಅಧ್ಯಕ್ಷ ಸತೀಶ್ ಕುಲಾಲ್ ಜಕ್ರಿಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಘಟನೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ರಾಜ್ಯಾಧ್ಯಕ್ಷ ತೇಜಸ್ವಿರಾಜ್, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷೆ ಜಯಂತಿ ಗಂಗಾಧರ್, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣ ಶಾಮ್, ಕುಲಾಯಿ ಗುಡಿಕೈಗಾರಿಕಾ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಅಡಿಕೆ ಉದ್ಯಮಿ ರಾಮಣ್ಣ ಉಪ್ಪಿನಂಗಡಿ, ಯದ್ದು ಫ್ರೆಂಡ್ಸ್ ಬರ್ಕೆ ಸ್ಥಾಪಕಾಧ್ಯಕ್ಷ ಯಜ್ಞೇಶ್ ಬರ್ಕೆ, ಸಾಮಾಜಿಕ ಕಾರ್ಯಕರ್ತ ಸಂತೋಷ್ ಕುಲಾಲ್, ಜಿಲ್ಲಾಧ್ಯಕ್ಷ ಸುಧಾಕರ್ ಸುರತ್ಕಲ್, ಗೌರವಾಧ್ಯಕ್ಷ ಸುಕುಮಾರ್ ಬಂಟ್ವಾಳ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ಕುಂಬಾರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ, ಅಮೂಲ್ಯ ಸೇವಾ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಮುರಳಿದಾಸ್ ಭಂಡಾರಿಬೆಟ್ಟು, ಸಮಾಜ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪದ್ಮನಾಭ ವಿಟ್ಲ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಉಪಾಧ್ಯಕ್ಷ ಸದಾನಂದ ಸಾಲ್ಯಾನ್, ಬಿಜೆಪಿ ಬಂಟ್ವಾಳ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಂದರ ಬಿ., ರಾಜ್ಯ ಕುಲಾಲ ಮಹಿಳಾ ಸಂಘದ ಬಂಟ್ವಾಳ ಘಟಕಾಧ್ಯಕ್ಷೆ ಭಾರತಿ ಸೇಸಪ್ಪ, ಜೆಸಿಐ ಬಂಟ್ವಾಳ ಅಧ್ಯಕ್ಷ ಉಮೇಶ್ ಮೂಲ್ಯ, ಬಂಟ್ವಾಳ ರೋಟರಿ ಕ್ಲಬ್ ಕಾರ್ಯದರ್ಶಿ ಕಿಶೋರ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಸತೀಶ್ ಜಕ್ರಿಬೆಟ್ಟು ಹಾಗೂ ಕಾರ್ಯದರ್ಶಿ ಪುನೀತ್ ಮೈರಾನ್‍ಪಾದೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment